STORYMIRROR

Mouna M

Abstract Classics Inspirational

4  

Mouna M

Abstract Classics Inspirational

ನಮ್ಮಪ್ಪ

ನಮ್ಮಪ್ಪ

1 min
367

ನಮ್ಮಪ್ಪ

 

ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ, ನಂಗೆ ಗೊತ್ತಿಲ್ಲ ಅದು ನಿಂಗೆ ಹೆಂಗೆ ಗೊತ್ತಗ್ಬೇಕಪ್ಪ!!

ಯಾಕೋ ಗೊತ್ತಿಲ್ಲ ನಿನ್ನ ಸವಿ ನೆನಪು ನನ್ನೇ ಕಾಡುತ್ತಪ್ಪ, ನೀನೆ ನನ್ನ ಪಾಲಿನ ದೇವರು ಕಣಪ್ಪ!!! 

ಜಲೇಬಿ, ಜೆಹಾಂಗಿರ್, ಲಡ್ಡೂ, ಅವನ್ ಪಾಲೂ ನಂಗೆ ಕೊಟ್ಟನಲ್ಲಪ್ಪ ನನ್ನಪ್ಪ, ದಾನ ಶೂರ ಕರ್ಣ ಕಣಪ್ಪ 

ಸದ್ದಿಲ್ಲದೇ ಪ್ರೀತಿ ಕೊಟ್ಟು ಕೈ ತುಂಬಾ ರೊಕ್ಕ ಕೊಟ್ಟವನೇ ನನ್ನಪ್ಪ ಆ ಸಿರಿವಂತನೇ ನನ್ನಪ್ಪ 

 

ತಪ್ಪ್ ಮಾಡ್ದಾಗ ಕೈ ಕಟ್ಟಿ ಮಾತಲ್ಲೇ ಬುದ್ದಿ ಹೇಳಿದ್ ನನ್ನಪ್ಪ, ನಿಂಗಿಂತ ದೊಡ್ಡ್ ಶಿಕ್ಷಕ ಬೇರೆ ಯಾರೂ ಇಲ್ಲಪ್ಪ.... 

 ಬಡವ ಬಲ್ಲಿದನೇ ಬರಲಿ, ಹೊಟ್ಟೆ ತುಂಬಾ ಉಣಬಡಿಸಿದ ಧರ್ಮಾರಾಯನಪ್ಪ ನಮ್ಮಪ್ಪ 

ಹಬ್ಬ ಹರಿದಿನಕ್ಕೆ ತಾನ್ ಮಾತ್ರ ಹಳೆ ಹರವಿ ತೊಟ್ಟನಲ್ಲಪ್ಪ, ದಡ್ಡಪ್ಪ ಅಲ್ಲಲ್ಲ ನನ್ನಪ್ಪ ದೊಡ್ಡಪ್ಪ 

ನಮ್ಮೆಲ್ಲರನೂ ಸುಖದ ಬಾವಿಗೆ ತಳ್ಳಿ ತಾನ್ ಮಾತ್ರ ದುಃಖ್ಖದ ಹೊಲದಲ್ಲಿ 

ನೇಗಿಲು ಹೊತ್ತು ರೈತನಾದನಪ್ಪ... 

 

ತನ್ನ ತಂದೆ ತಾಯಿಯನು ಪೂಜಿಸಿ ಗುರು ಸಿದ್ಧಾರೂಢರನ್ನು ಭಜಿಸಿ, ಆ ದೇವನ ಕೃಪೆಗೆ ಪಾತ್ರನಾದನಪ್ಪ

ರಾಮ ತಾನಾಗಿ, ಅಕ್ಕ ತಮ್ಮಂದಿರ ಏಳ್ಗೆಯಲಿ ತನ್ನನ್ನೇ ಮರೆತು, ಜೀವನದ ಜೋಕಾಲಿಯತೂಗಿಸಿದನಪ್ಪ  

ಮಡದಿ ಮಕ್ಕಳೊಡಗೂಡಿ ಸಂಸಾರದ ದೋಣಿಯ ಎಡಬಿಡದೆ ನಡೆಸಿ ನಾವಿಕನಾದ ನನ್ನಪ್ಪ

ದಡದಿ ನಮ್ಮೆಲ್ಲರ ಬಿಟ್ಟು ಯಾರಿಗೂ ಹೇಳದೆ ಹೋಗಿಬಿಟ್ಟ ನನ್ನಪ್ಪ, ಯಾರಾದ್ರೂ ಕಂಡಿರಾ ಇವನೇ ನಮ್ಮಪ್ಪ 

 

ಅಪ್ಪ ನೀ ಇದ್ದಾಗ ಅರೀಲಿಲ್ಲ, ಹೋದ್ಮ್ಯಾಲೆ ಅರಿತಿರುವೆ ನಾ ನನ್ನಪ್ಪ ಕೇಳ್ರಪ್ಪ 

ನೀವು ಈ ತಪ್ಪ್ ಮಾಡ್ದೆ, ಇದ್ದಾಗ ಪ್ರೀತಿ ಕೊಟ್ಟು, ಗೌರವವ ಉಣಬಡಿಸಿ ಅಪ್ಪನ ಪ್ರೀತಿಪಾತ್ರರಾಗಿ ಕಣ್ನರಪ್ಪ .... 

ಇದನ್ನೇ ಆ ದೇವಾ ಮೆಚ್ಚಿ ನಿಮ್ಮಲ್ಲೆರನ್ನು ಹರಸುವನಪ್ಪ!! ಇದು ನಮ್ಮಪ್ಪನ ಮೇಲಾಣೆ ನಿಜ ಕಣ್ನರಪ್ಪ !!!!

ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ, ನಂಗೆ ಗೊತ್ತಿಲ್ಲ ಅದು ನಿಂಗೆ ಹೆಂಗೆ ಗೊತ್ತಗ್ಬೇಕಪ್ಪ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract