STORYMIRROR

Gireesh pm Giree

Abstract Classics Inspirational

4  

Gireesh pm Giree

Abstract Classics Inspirational

ಕ್ರಾಂತಿ ಗೀತೆ

ಕ್ರಾಂತಿ ಗೀತೆ

1 min
593


ಕೆಚ್ಚೆದೆಯ ಗುಂಡಿಗೆಯ ಹೋರಾಟದ ಫಲವೇ ಸ್ವಾತಂತ್ರ್ಯ

ತ್ಯಾಗ ಬಲಿದಾನದ ಮಹತ್ವ ಸಾರುವ ಸ್ವಾತಂತ್ರ್ಯ

 ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ

ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ


ಉತ್ತರದಲ್ಲಿ ಹೊತ್ತಿದ ಕ್ರಾಂತಿ ಕಿಡಿಯ ಜ್ವಾಲೆ

ದಕ್ಷಿಣದಲ್ಲೂ ಹಬ್ಬಿತು ಸ್ವಾತಂತ್ರ್ಯದ ಬಿರುಸಿನ ಅಲೆ

ನೆತ್ತರು ಹರಿಸಿದರು ತಮ್ಮನ್ನೇ ಅರ್ಪಿಸಿದ ನಾಯಕರು

ಅವರೇ ನಮ್ಮಯ ಒಳಿತಿಗಾಗಿ ಶ್ರಮಿಸಿದ ಸಾಧಕರು


ಪರಕೀಯರ ಗುಂಡಿಗೂ ಹೆದರದ ಗುಂಡಿಗೆ

ಬ್ರಿಟಿಷರ ಸೊಕ್ಕು ಮುರಿದು ಕೊರಳಿಟ್ಟರು ನೇಣಿಗೆ

ವೀರ ಸ್ವರ್ಗವೇ ಸನಿಹಿಸಿತು ಇವರ ಬಳಿಗೆ

ವರವಾದರೂ ನೆರಳಾದರೂ ಭಾರತಾಂಬೆಯ ಮಡಿಲಿಗೆ


ಕಣ್ಣಲ್ಲಿದ್ದ ಸ್ವಾತಂತ್ರ್ಯದ ಕಿಚ್ಚಿಗೆ ರೊಚ್ಚಿಗೆ

ದಗದಗಿಸಿತು ಇಂಗ್ಲಿಷರ ಸೇನೆಯು ಜೊತೆಗೆ

ತ್ರಿವರ್ಣ ಧ್ವಜ ಹಾರಿತು ಮನೆ ಮನದಲ್ಲೂ ಈ ದಿನ

ನೆನೆಯೋಣ ನಮ್ಮವರ ಅನುದಿನ ಅನುಕ್ಷಣ




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract