STORYMIRROR

Gireesh pm Giree

Classics Inspirational Others

4  

Gireesh pm Giree

Classics Inspirational Others

ಸ್ವರಾಜ್ಯ

ಸ್ವರಾಜ್ಯ

1 min
390


ಸ್ವತಂತ್ರ ಹೋರಾಟದಲ್ಲಿ ಸ್ವರಾಜ್ಯ ಅಸ್ತ್ರ ಶಸ್ತ್ರ

ಭಾರತೀಯರಲ್ಲಿ ಭಾವೈಕತೆಯ ಒಗೂಡಿಸಿದ ಶಾಸ್ತ್ರ

ನಮ್ಮವರೇ ನಮ್ಮವರ ಆಳುವ ಕಾಲವೇ ಸ್ವಾತಂತ್ರ್ಯ

 ಬ್ರಿಟೀಷರ ಕಪಿಮುಷ್ಠಿ ಬಿಡುಗಡೆಯೇ ಸ್ವಾತಂತ್ರ್ಯ


ತ್ಯಾಗ ಬಲಿದಾನ ಕೆಚ್ಚೆದೆಯ ಹೋರಾಟಕ್ಕೆ ಸಿಕ್ಕ ಫಲ

ಆಂಗ್ಲರ ಗುಂಡಿಗೂ ಬಗ್ಗದ ಗುಂಡಿಗೆಯ ಗುಂಡಿಗೆಯು ನೇತಾರ ಬಲ

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಅದನ್ನು ಪಡಿದೇ ತೀರುವ ಛಲದ ಘೋಷಣೆ

ಮೂಡಿಸಿತು ಸ್ವಾತಂತ್ರ್ಯ ಪ್ರೇಮಿಗಳಲ್ಲಿ ಇದೇ ನನ್ನ ನೆಲ ಇದೇ ನನ್ನ ಜಲದ ಭಾವನೆ


ಸ್ವರಾಜ್ಯ ಕಲ್ಪನೆಯ ನೆಮ್ಮದಿಯ ತಾಣ ಸುರಾಜ್ಯ

ಸುರಾಜ್ಯ ಸಾಧನೆಯಿಂದ ಸಾಧ್ಯ ಗಾಂಧಿ ಕನಸಿನ ರಾಮರಾಜ್ಯ

ಸ್ವಾತಂತ್ರ್ಯ ಬಿತ್ತಿತು ವಿವಿಧತೆಯ ಏಕತೆ ಐಕ್ಯತೆಯ ಮುನ್ನುಡಿ

ನೇತಾರರು ಹಿಡಿದರು 

ಸ್ವರಾಜ್ಯ ಸುರಾಜ್ಯದ ಕೈಗನ್ನಡಿ


ಮಿಡಿಯಿತು ಈ ದೇಶಕ್ಕಾಗಿ ಹೃದಯ ಬಡಿತ

ಕ್ಷಣ ಕ್ಷಣವು ಹೆಚ್ಚಿತು ತನ್ನ ದೇಶ ಪ್ರೇಮದ ತುಡಿತ 

ಕೆಚ್ಚೆದೆಯ ಹೋರಾಟಕ್ಕೆ ನೆಮ್ಮದಿಯ ದಿನಗಳು ಇಂದು

ನಮಿಸಲೇಬೇಕು ನಾವೆಲ್ಲರೂ ನೇತಾರರ ಎಂದೆಂದು


Rate this content
Log in

Similar kannada poem from Classics