ಬೆಳದಿಂಗಳೂಟ
ಬೆಳದಿಂಗಳೂಟ
ಲೀಲಾ ವಿನೋದ
ಗೋಕುಲದಲಿ ಕಂಡದ್ದು
ಹಸಿದ ಬಾಲೆಯರ ಕೂಟ
ಅಂಗನೆಯರಂಗಳದಿ
ಅಂಬೆಗಾಲಿಕ್ಕುತಲಿ ಬಂದ
ಹೊಳೆವ ಕಣ್ಗಳ ಕಂದನ
ಬಂದರೆಲ್ಲರೂ ಓಡಿ ಕೂಡಿ
ಹಿಡಿಯಲು ಮುಕುಂದನ
ಓಡಾಡಿಸಿ ಹಸಿದವರ
ಬೆಳೆದಳೆದ ಮುಗಿಲೆತ್ತರ
ಕಂದನ ಹಿಡಿಯಲೇರಿದರು
ಮನೆ ಮರ ಬೆಟ್ಟದೆತ್ತರ
ಅಂಬೆಗಾಲಿನ ಕೂಸು
ಕ್ಷಣದಲಿ ಕೂತು ನಿಂತಿತ್ತು
ಬಾಲ ಗೋಪಾಲನಾಗಿ
ವಿಠ್ಠಲನಾಗಿ ಕುಣಿದಿತ್ತು
ಇಟ್ಟಿಗೆ ಮೇಲಿಟ್ಟ ಕಾಲು
ನಭದೆತ್ತರ ಬೆಳೆದ ದೇಹ
ವಿಶ್ವರೂಪವೇ ತೋರಿ
ದೂರವಾಯ್ತು ಸಂದೇಹ