STORYMIRROR

PRASANNA KUMAR

Classics

3  

PRASANNA KUMAR

Classics

ಪರಮ ವೀರ

ಪರಮ ವೀರ

1 min
11

ತಾಯಿಗೆ ಮಾತನು ಕೊಟ್ಟನು ಅವನು

ತಾಯಿಯೇ ದೇವರು ಎಂದವನು 


ಪಗಡೆಯಾಟದಲಿ ಗೆದ್ದ ತಾಯಿಗೆ

ಕೋಟೆಯ ಗೆದ್ದು ಕೊಡುವೆ ಎಂದನು

ಗೆಳೆಯನು ಗೆದ್ದು ಕೊಟ್ಟನು ಅವಗೆ

ಸ್ನೇಹಕೆ ಜೀವವ ನೀಡಿದನು

ಸಿಂಹಗಢ ದೊರಕಿತು ನಮಗೆ

ಸಿಂಹವು ಅಳಿಯಿತು ಎಂದನು


ಯವನನು ತೋರಿದ ಅಟ್ಟಹಾಸವ

ಮೆಟ್ಟಿ ನಿಂತನು ಶೌರ್ಯದಲಿ

ಸಾಮ್ರಾಜ್ಯವ ಕಟ್ಟಿದ ಅರಿಗಳ ಕುಟ್ಟಿದ

ವೀರತನದಲ್ಲಿ ಧೈರ್ಯದಲಿ


ಧರ್ಮದ ರಕ್ಷಣೆ ಉಸಿರು ಎಂದನು

ಸಮರಗೈದನು ಅಂಬಾಸುತನು

ಮಾದರಿ ಕಲಿ ಅವನಾಗಿಹನು

ಮನೆಮನಗಳಲಿ ತುಂಬಿಹನು


ಅಂಬಾ ಭವಾನಿಯ ಭಕ್ತನು ಅವನು

ಭಾರತಾಂಬೆಯ ವರಪುತ್ರನು

ಮತ್ತೆ ಯಾವ ತಾಯ ಮಡಿಲಲ್ಲಿ ಹುಟ್ಟುವನೋ

ಯಾರ ಮನೆಯ ಮಗನಾಗುವನೋ


ಹುಟ್ಟಿ ಬರಲಿ ಮತ್ತೊಮ್ಮೆ ಅವನು

ಭಾರತ ಧರ್ಮದ ಕುಲ ದೀಪಕನು

ಎಲ್ಲರೂ ಬಲ್ಲರು ಅವನನ್ನು

ಅವನೇ ಮರಾಠರ ಅಭ್ಯುದಯದ

ಪರಮ ವೀರ ಸಾಧಕನು


Rate this content
Log in

Similar kannada poem from Classics