ಕೆಂಪು
ಕೆಂಪು


ಸೂರ್ಯನ ಕಿರಣವು ಸೋಕಲು
ವಸುಧೆಯ ಮೊಗವು ಕೆಂಪಾಯ್ತು
ರಂಗಾದ ಮುಖವನು ನೋಡಲು
ಚೈತ್ರವು ಹಸಿರನು ಚೆಲ್ಲಿತು
ಕ್ರೋಧಿನಾಮ ಸಂವತ್ಸರ
ಯುಗಾದಿ ಹಬ್ಬವ ಅರಳಿಸಿತು
ಬೇವು ಬೆಲ್ಲ ಹಂಚಲು
ಪ್ರೀತಿ ಉತ್ಸಾಹವು ಉಕ್ಕಿತು
ಫಲವತ್ತಾಗಲು ಭೂಮಿಯು
ಸಜ್ಜಾಗಲು ಮುಂದಾಯಿತು
ರೈತಾಪಿ ಜನರ ಸಂತಸವು
ಹೊಲಗದ್ದೆಗಳಿಗೆ ಹೊರಳಿತು
ಕೆಂಪು ಇರಬೇಕು
ಸುಂದರ ಕೆಂಪು
ಹರಡಲಿ ಲೋಕದಿ
ಹರುಷದ ಕೆಂಪು