ದಾರಿಹೋಕನ ಪದಗಳು
ದಾರಿಹೋಕನ ಪದಗಳು
ಪಕ್ಷಿಗಳು ಹೇಳುತಿವೆ ಹಂಗಿನಲಿ ಇರಲೇಕೆ
ಮುಳ್ಳುಗಳು ತುಂಬಿರುವ ಪಂಜರವು ನಮಗೇಕೆ
ಮನುಜರ ಬದುಕಲ್ಲಿ ಲೋಭವದು ತುಂಬಿರಲು
ಅವರೊಡನಾಟ ಸಲ್ಲ - ದಾರಿಹೋಕ
ಬದುಕಿನ ಗಡಿಯಾರ ಎಣಿಕೆಯ ತಪ್ಪುವುದೇ
ಹೃದಯದ ಬಡಿತವು ಏರಿಳಿತ ಒಪ್ಪುವುದೇ
ನೋಡುತಿರೆ ಬಲುಚೆಂದ ಲೋಕದಲಿ ಎಲ್ಲವದು
ಒಳಮರ್ಮದ ಲೆಕ್ಖವೇನೋ - ದಾರಿಹೋಕ