STORYMIRROR

PRASANNA KUMAR

Classics

3  

PRASANNA KUMAR

Classics

ಓ ಮಾನವ

ಓ ಮಾನವ

1 min
32

ನಾನು ನಾನು ಎನ್ನದಿರು

ಬಿಂಕದಿ ಬೀಗುತ ಮೆರೆಯದಿರು

ಓ ಮಾನವ .. ....


ದಿನಕರನು ಜಗವನ್ನು

ಬೆಳಗುತ ನೋಡುತಿಹನು

ಮೌನದಲಿ ಬೆಳದಿಂಗಳನು

ಚಂದಿರನು ಚೆಲ್ಲಿಹನು

ಸೂರ್ಯ ಚಂದ್ರರೇ ಹೀಗಿರಲು

ದೊಡ್ಡಸ್ತಿಕೆಯ ಬಿಡು ನೀನು 


ಗ್ರಹತಾರೆಗಳು ಮಿಗಿಲಿಹುದು

ಅವುಗಳ ಹೊತ್ತ ಮುಗಿಲಿಹಿದು

ಅಣುವಲ್ಲಿ ಅಣು ನೀನು

ಕಣ್ಣುಗಳಿದ್ದೂ ಕುರುಡನು

ಲೋಕಕೆ ಏನನು ಕೊಟ್ಟಿರುವೆ 

ಒಣ ಮಾತಲ್ಲೇ ಸವೆದಿರುವೆ 


ನಾಡಿಗೆ ಕೊಡುಗೆಯ ಕೊಟ್ಟಾಗ

ಬಾಳು ಆಗದೆ ಸುಂದರ

ನಿಜವನು ಒಮ್ಮೆ ಅರಿತಾಗ

ಆಗುವೆ ಪೂರ್ಣ ಚಂದಿರ






Rate this content
Log in

Similar kannada poem from Classics