ಗಜಲ್
ಗಜಲ್
ಮುಸ್ಸಂಜೆಯ ತೇವ ನಯನಗಳು
ಭಾರಿಗೊಂಡವು ತುಳುಕುತ್ತಿರುವ ಹನಿಗಳಿಂದ...
ಆ ಹನಿಗಳೇ ಭಾವನೆಯ ಲೇಖನಿಯಿಂದ ಹೊರಬಂದವು...
ಗಜಲಗಳು ರೂಪುಗೊಂಡವು!!!
ಕುಸುಮಗಳು ಸುಗಂಧವನು ಬೀರುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!
ಮೇಘಗಳು ಇಬ್ಬನಿಯನು ವರ್ಷಿಸುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!
ಕಟ್ಟಿದ ಪಣ ಜಯಿಸಲು ಹೋಗಿ ಕುಂತೆ ಚದುರಂಗವನು ಆಡಲು. ಆದರೆ,
ಬದುಕಿನ ಚದುರಂಗದಲ್ಲಿ ಸೋಲುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!
ಮುಸ್ಸಂಜೆಯೂ ಕಳೆಯಿತು...
ಕ್ಷಿತಿಜದಿಂದ ಬರುವ ದಾರಿಯನು ದುರುಗುಟ್ಟುತ್ತಿರುವುದರಲ್ಲಿ!
ಸೂರ್ಯಾಸ್ತದ ಕೇಸರಿ ಅಲೆಗಳು ನಯನಗಳಲ್ಲಿ ಪ್ರತಿಬಿಂಬಿಸುತ್ತಿತ್ತು!
ಕಣ್ಣುಗಳು ತುಂಬಿ ಬರುತ್ತಿತ್ತು!!!
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಸ್ರವಿಸುತ್ತಿದ್ದ ಸಾಲುಗಳಿಗೆ ಪ್ರಾಸ ದೊರೆಯದಿರುವುದರಿಂದ ಕಣ್ಣುಗಳು ತುಂಬಿ ಬಂದವು
ದಿನಗಳು, ವಾರಗಳು, ತಿಂಗಳುಗಳು ಉರುಳಿದವು... ಉರುಳಿದವು ವರುಷಗಳು!
ನಿರೀಕ್ಷಿಸುತ್ತಿದ್ದ ಹೊತ್ತು ಕಳೆದು ಹೋಗುತ್ತಿದ್ದಂತೆ ಕಣ್ಣುಗಳು ತುಂಬಿ ಬಂದವು!