STORYMIRROR

Shiqran Sharfuddin

Romance Classics Fantasy

4  

Shiqran Sharfuddin

Romance Classics Fantasy

ಗೀತಿಕೆ!!

ಗೀತಿಕೆ!!

1 min
245

ತುಟಿಗಳನ್ನ ಸ್ಪರ್ಶಿಸಿರಿ, ಗಾನವ ನನ್ನ ಅಮರಗೊಳಿಸಿ!

ಶುಭಹಿತನಾಗಿ ನನ್ನವ, ಒಲವು ನನ್ನ ಅಮರಗೊಳಿಸಿ!


ಹರೆಯ ಸೀಮೆಯಿರದಿರಲಿ, ಇರದಿರಲಿ ಜನುಮದ ಬಂಧನ;

ಪ್ರೇಮ~ಅನುರಕ್ತಿಯುಳ್ಳವರು ನೋಡುವರು ಕೇವಲ ಮನ;

ನವ ಅನುಸರಣವ ನಡೆಸಿ, ಈ ಆಚಾರ ಅಮರಗೊಳಿಸಿ!


ಗಗನದ ಪ್ರಸನ್ನತೆಯು ಆವರಿಸಿದೆ ನನ್ನೊಂಟಿ ಮನದಲಿ;

ಕಾಲ್ಗೆಜ್ಜೆಯು ಕಣಕಣಿಸುತ, ಆಗಮಿಸಿ ಬದುಕಿನಲಿ;

ಉಸಿರುಗಟ್ಟಿಸಿ ತಮ್ಮ, ಸಂಗೀತವನು ಅಮರಗೊಳಿಸಿ!


ಕಸಿದು ಕೊಂಡಿತು ಜಗವ ನನ್ನಿಂದ, ಬಯಸಿದ್ದನೆಲ್ಲಾ ನಾನು|

ಸಾಧಿಸಿದರೆಲ್ಲರೂ ನನ್ನದಿಂದ, ಎಲ್ಲದರಲ್ಲೂ ಸೋತವ ನಾನು|

ಸೋತು ನಿಮ್ಮ ಮನವ, ಗೆಲುವು ನನ್ನ ಅಮರಗೊಳಿಸಿ!



Rate this content
Log in

Similar kannada poem from Romance