STORYMIRROR

Ranjitha M

Romance Classics Others

4  

Ranjitha M

Romance Classics Others

ಮಳೆಯೆಂಬ ಕವಯಿತ್ರಿ

ಮಳೆಯೆಂಬ ಕವಯಿತ್ರಿ

1 min
367

ಮಳೆಯೊಳಗೆ ನೆನೆಯಬೇಕು

ಮನಸ್ಸು ಹಗುರವಾಗುವವರೆಗು

ಇಳೆಯೊಳಗೆ ಕುಣಿಯುವ

ಮಳೆಯ ಸಂಗ ಮಾಡಬೇಕು


ಧರಣಿಯ ಕತ್ತಿಗೆ ಮಳೆಹನಿಯ ಮಾಲೆ

ವರುಣನ ಕೊಡುಗೆಯಲ್ಲದೆ ಮತ್ತೇನು...?

ಭುವಿಯ ಒಡಲೊಳಗೆ ಹಸಿರ ತುಂಬಿ

ನಳನಳಿಸುವಂತೆ ಮಾಡಿದ ಮಳೆ ಜಾದೂಗಾರನೆ ತಾನೆ??


ನಿಂತ ಹಳ್ಳ ಕೊಳ್ಳಗಳು ರಭಸದಿ ನದಿಯ

ಬೇಟಿಯಾಗಲು ಸಂಭ್ರಮದಿ ಹೊರಟಿವೆ 

ಮುದುವೆಯ ದಿಬ್ಬಣವು ಹೊರಟಂತೆ

ಕೆಂಬಣ್ಣದ ನೀರು ಹೋಳಿ ಆಡಿದಂತೆ


ಸಾಲು ಸಾಲು ಮರಗಳ ಮೈಯಲ್ಲಿ

ಮಳೆಹನಿಗಳ ಚಿತ್ತಾರ ಚಂದಗಾಣಿಸಿದೆ ನಿಸರ್ಗವ

ಎಲೆ ಹೂಗಳು ಮಿಂದು ಕುಳಿತಿವೆ

ಎಲ್ಲೋ ಹೊರಡಲು ಅಣಿಯಾದಂತೆ


ದುಂಬಿ ಜೇನುಗಳು ಮಳೆಯಲಿ ಆಡುತಿವೆ

ಹೊಸದಾದ ಪದ್ಯವ ಸೃಷ್ಟಿಸಿ ಹಕ್ಕಿಗಳು ಹಾಡುತಿವೆ

ಮಳೆಯೊಡನೆ ಬೆರೆತು ತಂಪಾದಳು ಧರಿತ್ರಿ

ನಾಚಿ ನಿರಾಗಿ ಶೃಂಗಾರ ಕಾವ್ಯವ ಬರೆದಳು

ಹಾಗಾದರೆ ವಸುಂಧರೆ ಕೂಡ ಒಬ್ಬ ಕವಯಿತ್ರಿ!!?


ಮಳೆಯಲಿ ನೆನೆಯಬೇಕು

ಮಳೆಯೊಳಗೆ ಸೇರಿಬಿಡಬೇಕು!


Rate this content
Log in

Similar kannada poem from Romance