ಪ್ರೀತಿಯ ಮಳೆ
ಪ್ರೀತಿಯ ಮಳೆ
ನಿನ್ನ ಕಣ್ಣಲೇ ಅಡಗಿಹುದು
ನಿನ್ನೆಲ್ಲ ಸೊಬಗು.
ಅದರಂದಲೇ ಹೊಮ್ಮುವುದು
ನಿನ ಮಾತ ಸೊಲ್ಲು.
ಮಾತಿಲ್ಲ ಮೌನದಲೇ ಬೆಸಗೊಂಬುವೆ
ಹೇಳಿ ಬಿಡುವೆಯಲ್ಲ
ಆ ಮಾತ ಕೇಳೇ ಉಕ್ಕುವುದು
ಮನದುಂಬಿ ಪ್ರೀತಿ.
ಹೇಳಲೇನುಂಟು ಕೇಳಲೇನುಂಟು
ಅದೊಂದು ಕಾಮನಬಿಲ್ಲು.
ಬೇಕಿಲ್ಲವದಕೆ ಕೈ ಉರುಟಣೆಯನಾಡಲು
ಕಣ್ಣಗೊಂಬೆಯಲಿ ಎಲ್ಲ ಮುಗಿಸಿಬಿಡುವೆ.
ಕಣ್ಣುಗಳ ಪಿಳಕಿಸೆ ಝಳಪಿಸೆ
ಹೊರಡುವುದು ಮಿಂಚು.
ಗುಡುಗು ಸಿಡಿಲಿಲ್ಲದೆಯೇ
ಸುರಿಸುವೆ ಪ್ರೀತಿಯ ಮಳೆಯನ್ನೇ.
ಪ್ರೀತಿಯ ಹೊಳೆ ಹರಿದು
ಮೈಯೆಲ್ಲ ಸಂಚರಿಸಿ ಸೇರುವುದು ಹೃದಯವ.
ಈ ಪರಿಯ ಪ್ರೀತಿಗೆ ಬೆರಗಾಗಿ ಮಗುವಾಗಿ
ವಿಧೇಯತೆಯ ತೋರುವೆ.
ಹೇಳುವರೇಕೆನಗೆ ಅವರಿವರಲ್ಲಿ
ಅಮ್ಮಾವ್ರ ಗಂಡ ಎಂದು.
ಗೊತ್ತಿಲ್ಲ ಪಾಪ ಅವರಿಗೆ
ನಿನ ಕಣ್ಣಲ್ಲಿ ತುಂಬಿಹಾ ಪ್ರೀತಿಯ ಆ ಶರಧಿ.