ರೂಪ
ರೂಪ


ಮನಸಾರೆ ನಾ ಕಂಡು
ನೀ ನನ್ನ ಮನಸೋರೆಗೊಂಡು
ಮನಸಾರೆ ಬಯಸಿದ
ಒಲುಮೆ ನೀನು...
ನನ್ನೊಲುಮೆ ನೀನು...
ನಾ ಕಂಡ ನನ್ನ ಪ್ರೇಮದ
ಚಿಲುಮೆಯ ಬುಗ್ಗೆ ನೀನು..
ಕನಸಿನಲ್ಲೂ ನನ್ನ ಕಾಡುವ
ಚೆಲುವ ಚೆನ್ನಿಗ ನೀನು....
ಈ ನನ್ನ ಕನಸಿನ ರೂಪ
ನೀನೇ ಅಲ್ಲವೇನು...!?
ನನ್ನ ಈ ಪ್ರೇಮದ
ಹೊಸ ನವಿರಾದ ಪ್ರೀತಿಯ
ಭಾವನೆಗಳು ನೀನೇ ಅಲ್ಲವೇನು...!?
ನನ್ನೀ ಕಣ್ಣ ರೆಪ್ಪೆಯ
ಕಣಣ್ಣಿನ ಅಂದವೇ ನಿನೇ ಅಲ್ಲವೇನು...!!!!
ಅ ಕಣ್ಣಿನ ಕಾಡಿಗೆಯ ಸೊಬಗು
ನಿನ್ನ ಆಕರ್ಷಸಲಿಲ್ಲವೇನು...!!!
ನಿನ್ನ ರೂಪ ನನ್ನ ಕಣ್ಣಲ್ಲಿ
ಮನದ ಮೂಲೆಯಲಿ
ಹಚ್ಚೊತ್ತಿ ಕುಳಿತಿರುವಾಗ....!!!
ಕಣ್ಣು ಬಿಟ್ಟು ನೋಡಿದ ಕಡೆಯೆಲ್ಲಾ
ನಿನ್ನದೇ ರೂಪ ಕಂಡಂತಾಗಿ
ನಿನ್ನದೇ ಪ್ರತಿಬಿಂಬ ಕಾಣುವಂತಾಗಿಹುದು...
ಹುಣ್ಣೆಮೆಯ ಚಂದಿರನ
ಮತ್ತೊಂದು ರೂಪವೇ ನೀನು..
ನನ್ನೊಲುಮೆಯ ಬೆಳದಿಂಗಳ
ಚೆಲುಮೆಯ ಚಂದಿರ ನೀನು
ಕತ್ತಲೆಯಲ್ಲೂ ನನ್ನ ಕಣ್ಣಿಗೆ
ಕಾಣುವ ನನ್ನದೇ ಪ್ರತಿಬಿಂಬದಲಿ
ನಾ ಕಾಣುವ ಪ್ರೇಮದ
ಪ್ರತಿಬಿಂಬದ ರೂಪ ನೀನು..