STORYMIRROR

Ramesh gundmi

Abstract Romance

5  

Ramesh gundmi

Abstract Romance

ನಾಚಿಕೆಯ ಒಡವೆ ತೊಟ್ಟು

ನಾಚಿಕೆಯ ಒಡವೆ ತೊಟ್ಟು

1 min
564


ಅವನು ಚಲುವರಲ್ಲಿ ಚಲುವ

ಅವಳೋ ಅತ್ಯಂತ ಚಲುವಿ.

ಅವ ನೋಡಿದ ಅವಳನೆ

ನಸು ನಾಚಿದಳು.


ನಸು ನಾಚಿಕೆಯ ಒಡವೆ

ಅವಳ ಗಲ್ಲವ ಕೆಂಪೇರಿಸಿತು.

ಅವನು ಅವಳೆಡೆಯೇ ಹೋಗಿ

"ಹಲೋ ಸುಮಾ" ಅಂದನು.


ಅವಳು ಇನ್ನೂ ತುಸು ನಾಚಿ,

ನನ್ನೆಸರು ಸೌಮ್ಯ ಎಂದಳು.

ಅವನೆಂದ, ಒಳ್ಳೆಯದು ಸೌಮ್ಯ,

ನಾನು ನಿಮ್ಮನ್ನು ಹೂವೆಂದು ಕರೆದೆ.


ಅವಳು ಮೈಪೂರ್ತಿ ಕೆಂಪೇರಿ,

ನಾಚಿ ನೀರಾದಳು.

ಅವಳ ಚೆಲುವು ಹೆಚ್ಚಾಯಿತು

ಮೈತುಂಬಾ ನಾಚಿಕೆ ಧರಿಸಿ.


"ಸೌಮ್ಯ ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ,

ಬದುಕು ಕೊಡುವಿರಾ ಎನಗೆ?" ಎಂದನು.

ಕಣ್ಣಲಿ ಕಣ್ಣಿಟ್ಟು ನೋಡಿದ,

ಭುಜ ಮುಟ್ಟಿ ಪ್ರೀತಿ ತೋರಿದ.


ಅವಳು ಮೈಪೂರ್ತಿ ನಾಚಿಕೆಯಿಂದ 

ಮುದ್ದೆಯಾಯಿತು, ಒದ್ದೆಯಾಯಿತು.

"ನಾನು ಕೂಡ" ಎನ್ನುತ ನಾಚಿಕೆಯ

ಒಡವೆ ತೊಟ್ಟು ಅವನ ಎದೆಗೊರಗಿದಳು.


ಹೀಗೆ, ನಾಚಿಕೆಯ ಒಡವೆ ತೊಟ್ಟು

ನಲ್ಲನಾಗಿಸಿಕೊಂಡಳು ಚಲುವನ.

ಚಿನ್ನದೊಡವೆ ಚೆನ್ನ

ನಾಚಿಕೆಯ ಒಡವೆ ಇನ್ನೂ ಚೆನ್ನ.





Rate this content
Log in

Similar kannada poem from Abstract