ಹೊಸ ಬಾಳು
ಹೊಸ ಬಾಳು
ಹೆಣ್ಣು ಹುಟ್ಟಿದ ಮನೆ ಬಿಟ್ಟು
ಗಂಡನ ಮನೆಗೆ ಕಾಲಿಟ್ಟು
ತನ್ನ ಕನಸಿನ ಮೂಟೆ ಬಿಚ್ಚಿ
ಗಂಡನ ಕನಸಿನೊಂದಿಗೆ ಹಚ್ಚಿ
ಗಂಡನ ಮನೆ ದೀಪ ಹಚ್ಚುತಾಳೆ
ತವರಿನ ಶಿಸ್ತು ಮೆರಿತಾಳೆ
ಕೊಟ್ಟ ಮನೆಯ ಮರ್ಯಾದೆ ಉಳಿಸಿ
ಬಂದ ಮನೆಯ ಗೌರವ ಹೆಚ್ಚಿಸಿ
ತನ್ನ ಹೊಸಬಾಳು ಸುರು ಇಡುತ್ತಾಳೆ
ಗಂಡನಿಗೆ ಹಾಲು ತಂದು ಕೊಡುತ್ತಾಳೆ.
ತಲೆ ತಗ್ಗಿಸುತ್ತಾಳೆ
ನಸು ನಾಚುತ್ತಾಳೆ
ಹಾಲು ಕೊಡುತ್ತ ಕಂಪಿಸುತ್ತಾಳೆ.
ವಾರೆ ಕಣ್ಣಲ್ಲೇ ನೋಡುತ್ತಾಳೆ.
ಸೆರಗು ಸರಿ ಮಾಡಿಕೊಳ್ಳುತ್ತಾಳೆ.
ಹಿಡಿದ ಕೈ ಆಧಾರಿಸಿ
ಹೂ ಮಂಚಕ್ಕೆ ಬರುತ್ತಾಳೆ.
ಆ ಗದ್ದ ಹಿಡಿದ ಸ್ಪರ್ಶಕೆ
ಕೆಂಪೇರುತ್ತಾಳೆ
ಕೈ ಕೊಸರಿದಂತೆ ಮಾಡಿ
ತಲೆಗೆ
ಅವನೆದೆ ಆಧಾರವಾಗಿಸುತ್ತಾಳೆ.
ಅವನ ಬಿಸಿಯುಸಿರ ಕಾವಿಗೆ
ಗಲಿಬಿಲಿಗೊಳ್ಳುತ್ತಾಳೆ
ಕೊಟ್ಟ ಮೃದು ಮುತ್ತಿಗೆ ಕತ್ತೆತ್ತುತ್ತಾಳೆ.
ಕಣ್ಣಿಗೆ ಕಣ್ಣು ಬೆಸೆಯುತ್ತಾಳೆ.
ಆಲಿಂಗನಕೆ ಅನುಯಿಸುತ್ತಾಳೆ.
ಹೊಸೆಯುತ್ತಾಳೆ
ಬೆಸೆಯುತ್ತಾಳೆ
ಮೌನದಲೇ ಬೆಸಗುತ್ತಾಳೆ.
ಸಪ್ತಪದಿಯ ಮೊದಲ ಹೆಜ್ಜೆಗೆ
ಅರ್ಥ ಕೊಡುತ್ತಾಳೆ.
ಹೊಸಬಾಳು ಪ್ರಾರಂಭಿಸುತ್ತಾಳೆ.
ನಲಿಯಿತ್ತಾಳೆ.
ನಲಿಸುತ್ತಾಳೆ.
ಬೆರಳಲೇ ಉಲಿಯುತ್ತಾಳೆ..
ಪಿಸುಗುಡುತ್ತಾಳೆ..
ಆಡುತ್ತಾಳೆ
ಹಾಡುತ್ತಾಳೆ.
ಉರುಟಣೆಗೆ ಕರಗುತ್ತಾಳೆ.
ಕನಲುತ್ತಾಳೆ.
ನಿಜಸ್ವಪ್ನದಲಿ ನಿದಿರಿಸುತ್ತಾಳೆ.
ತನು ಮನದಿಂದ ಅವನವಳಾಗುತ್ತಾಳೆ.