ನನ್ನವನು
ನನ್ನವನು
ಮೋಸದಿಂದ ಮೋಹದಿ
ಕರೆಯಲಿಲ್ಲ ನಿನ್ನ
ನಾಟಕವಾಡಿ ಒಲಿಸಲಿಲ್ಲ
ತಿಳಿದುಕೊ ಚೆನ್ನ
ಸುಮ್ಮನೇ ನನ್ನವನಾಗಿಸಲಿಲ್ಲ ನಿನ್ನ
ಒಂದು ದಿನದ ಮಾತಲ್ಲ
ಸ್ನೇಹವೆಂಬುದು ಬರಿಯ
ಕರಗುವ ವಸ್ತುವಲ್ಲ
ಕಣ್ಣೀರು ಸುರಿಸಿ ಕರುಣೆ
ತೋರೆಂದು ಬೇಡಿಲ್ಲ
ಸುಮ್ಮನೇ ನನ್ನವನಾಗಿಸಿಲ್ಲ ನಿನ್ನ
ವರುಷಗಳು ಉರುಳಿತಲ್ಲ
ಭಾವನೆಗಳು ಬೆರೆಯಿತಲ್ಲ
ಕನಸುಗಳು ಸೇರಲು
ಮನಸು ಒಂದಾಯಿತಲ್ಲ
ಗಟ್ಟಿ ಗೋಡೆಯಂತೆ ನೀ
ನಿಂತೆ ಸದಾ ಮನದಲ್ಲಿ
ಅರೆ ಕ್ಷಣವೂ ಬಿಟ್ಟು ಇರದಂತೆ
ಸಿಹಿ ನೋವು ಎದೆಯಲ್ಲಿ
ಸುಮ್ಮನೇ ನನ್ನವನಾಗಿಸಲಿಲ್ಲ ನಿನ್ನ
ಸಂತಸಕ್ಕೂ ಕಾರಣವಾದೆ
ವಿರಹದಲಿ ಭಾಗಿಯಾದೆ
ನೊಂದು ಬೆಂದಾಗ
ನನ್ನ ತಬ್ಬಿ ಸಂತೈಸಿದೆ
ಮುನಿಸಲಿ ದೂರಾಗಲು
ಕಾಡಿ ಬೇಡಿ ಕರೆದೆ
ಸುರಿಸಿದೆ ಒಲವ ಸುಧೆ
ನೆರಳಿನಂತೆ ಕಾದೆ
ಸುಮ್ಮನೇ ನನ್ನವನಾಗಿಸಲಿಲ್ಲ ನಿನ್ನ