Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Surabhi Latha

Abstract Classics Others

4  

Surabhi Latha

Abstract Classics Others

ದುರ್ಗೆ

ದುರ್ಗೆ

1 min
1.5K


ಮೌನದಿ ಮುಗುಳು ನಗೆಯಲಿ ಜನರ ನಾಟಕ

ನೋಡುತ ನಿಂತೆಯ ಅಮ್ಮ ದೇವಿ 

ಸತ್ಯ ನೀತಿ ಧರ್ಮ ದ ಹೆಸರು ಹೇಳುತಲಿ 

ಕಚ್ಚಾಡುವುದೇನೋ ಇವರ ಕರ್ಮ 


ಮಂಜು ಮುಸುಕಿದಂತೆ ಬಡತನ ಅಪ್ಪಿಹುದು 

ಜಗದಲ್ಲಿ, ದುಗುಡವು ತುಂಬಿಹುದು ಎದೆಯಲ್ಲಿ 

ಸಿರಿವಂತರ ಟೋಳ್ಳು ಮಾತು ತುಂಬದು ಹೊಟ್ಟೆ 

ತಾಯಿ ನೀ ಕೈ ಬಿಟ್ಟರೆ ನಾನು ಕೆಟ್ಟೆ 


ಬಕುತಿಯಲಿ ಹೂವ ಅರ್ಪಿಸಲು ಹಣವಿಲ್ಲ 

ಗಗನಕ್ಕೆ ಏರಿದ ಬೆಲೆಯು ಬದುಕು ಸುಡುವುದಲ್ಲ 

ಮನಸ್ಸಿನ ತಳ ಮಳಕೆ ಯಾರು ಹೊಣೆ 

ಅಮ್ಮ ನೀ ಕೈ ಬಿಟ್ಟರೆ ಸಾವೇ ನಿನ್ನಾಣೆ


ರೋಗ ರುಜಿನದ ಅಟ್ಟ ಹಾಸ ಮೆರೆದಿದೆ 

ಮೋಸ ವಂಚನೆ ಮುಗಿಲ ಮುಟ್ಟಿದೆ 

ತಾಯಿಯ ಕರುಣೆ ಬೇಕಾಗಿದೆ 

ಚಾಮುಂಡಿಯ ಅವತಾರ ಕಾಣಬೇಕಿದೆ 


ಕಣ್ಣ ಒರೆಸಿ ಎದೆಗೆ ಅಪ್ಪಿ ಮಡಿಲಿಗೆ ನನ್ನನು ಕರೆಸಿಕೋ

ಹಿಂದಿನ ಜನ್ಮದ ಪಾಪಗಳ ನಿನ್ನ ಪಾದಗಳಿಗೆ ಸೇರಿಸಿಕೊ 


 


Rate this content
Log in