ಭಾರತಮಾತೆ
ಭಾರತಮಾತೆ
ನಮೋ ನಮೋ ಭಾರತೀ
ಓ ದೇವಿ ಭಾರತೀ
ಶುಭ್ರವರ್ಣೆ ಭಗವತಿ
ನೀಡೆಮಗೆ ದಿವ್ಯಮತಿ
ನಿನ್ನ ಪುಣ್ಯಭೂಮಿಯೇ
ನಮಗದೋ ತೊಟ್ಟಿಲು
ನದಿಗಳಾ ಕಲರವವೇ
ಜೋಗುಳದಾ ಲಾಲಿಯು
ನಿನ್ನ ಅಮರವಾಣಿಯೇ
ನಮಗೆ ವೇದಮಂತ್ರವು
ನಿನ್ನ ಧರ್ಮ ನುಡಿಗಳೇ
ನಮಗದೋ ಮಾನ್ಯವು
ನಿನ್ನ ಸೇವೆ ಮಾಡಲು
ಶಕ್ತಿ ಭಕ್ತಿ ಕರುಣಿಸು
ಅಜ್ಞಾನವನ್ನೆ ಕಳೆಯಿಸು
ಜ್ಞಾನ ದೀಪ ಬೆಳಗಿಸು