STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಎಲ್ಲಿಹೆಯೋ ನೀ

ಎಲ್ಲಿಹೆಯೋ ನೀ

1 min
106

ಎಲ್ಲಿಹೆಯೋ ನೀ ಯದುಕುಲ ತಿಲಕನೆ

ಮಧುರೆ ಗೆ ನಡೆದೆಯೋ ಗೋಕುಲ ತೊರೆದು

ಮಂದಹಾಸ ಮುರಳೀ ಲೋಲ ಗೋವಿಂದ 

ವಂಶೀ ನಿನಾದ ಗೋಪಾಲ ಬಾರೋ


ಯಮುನೆಯ ತಟದಲಿ ಕಾದಿಹೆ ನಾನು

ನಿನ್ನಯ ವಿರಹದಿ ಬಳಲಿ ಬೇಯುತ

ನಿನ್ನ ಕೊಳಲದನಿ ಕಿವಿಯಲಿ ತುಂಬಿದೆ

ತೋರುತ ಕೊಳಲ ಓಡುತ ಬಾರೋ


ಗೊಲ್ಲರ ಮನೆಯಲಿ ಬೆಣ್ಣೆಯು ಸೊರಗಿದೆ

ಗೋಪಿಯರ ಕಂಗಳಲಿ ಜಲಧಿಯುಕ್ಕಿದೆ

ಬೃಂದಾವನವು ಬಳಲಿ ಹೋಗುತಿದೆ

ನವನೀತ ಚೋರ ನೀ ಮುದದಲಿ ಬಾರೋ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract