STORYMIRROR

Vijaya Bharathi

Classics Inspirational Children

4  

Vijaya Bharathi

Classics Inspirational Children

ಮರಳಿ ಶಾಲೆಗೆ

ಮರಳಿ ಶಾಲೆಗೆ

1 min
554


ಕಳೆದೇ ಹೋಯಿತು ಒಂದು ವರುಷ

ಮರಳಿ ಬಂದಿದೆ ಮತ್ತೊಂದು ವರುಷ

ಮೆಲ್ಲನೆ ಸರಿಯಿತು ಕರೋನಾ ರೋಷ

ಕೂಗಿ ಕರೆಯುತಿದೆ ವಿದ್ಯಾಗಮ ಹರುಷ


ಕೊನೆಗಾಣುತಲಿದೆ ದೀರ್ಘಾವಧಿ ರಜೆ 

ಮುಗಿದಿದೆ ಮಕ್ಕಳ ಗೃಹಬಂಧನ ಸಜೆ

ಸೋಮಾರಿತನ ಹೆದರೋಡುತ್ತಿದೆ

ಅಮಿತೋತ್ಸಾಹ ಪುಟಿದೇಳುತ್ತಿದೆ


ಶುಚಿಯಾಗಿಸುತ ಸಮವಸ್ತ್ರಗಳ

ಹೊಳಪಾಗಿಸುತ ಶಾಲಾ ಶೂಗಳ 

ಹೆಗಲೇರಿಸುತ ಪಾಟಿಯ ಚೀಲಗಳ

ಮಕ್ಕಳು ಹೊರಟರು ಶಾಲೆಗೆ ಮರಳಿ 




Rate this content
Log in

Similar kannada poem from Classics