ನೆನಪು ಅಲೆಯುತ್ತಿತ್ತ
ನೆನಪು ಅಲೆಯುತ್ತಿತ್ತ
ಅಂದು
ಮನದ ವನದೊಳಗೆ ನಿನ್ನ
ನೆನಪುಗಳು ಹಸಿರು ಹಸಿರು.
ನೀನಿಲ್ಲದೆ ಜೀವನ ಬರಡು.
ಅನುಕ್ಷಣವೂ ನೆನಪುಗಳು
ಸುತ್ತ ಮುತ್ತ ಅಲೆಯುತ್ತಿತ್ತ.
ಇಂದು
ಋತುಮಾನ ಉರುಳುರುಳಿ
ಹೊಸ ಚಿಗುರುಗಳು ತಲೆಯೆತ್ತಿ
ಬದಲಾವಣೆಯ ಅಲೆಯಲ್ಲಿ,
ಹಳೆಯ ಅವಶೇಷಗಳು. ಅಲ್ಲಲ್ಲಿ
ಮಸುಕಾದವು ನಿನ್ನ ನೆನಪುಗಳು.