STORYMIRROR

ಸಂತೋಷ್ ನಾಗರತ್ನಮ್ಮಾರ .

Abstract Classics Inspirational

4  

ಸಂತೋಷ್ ನಾಗರತ್ನಮ್ಮಾರ .

Abstract Classics Inspirational

ಜೋಗದೈಸಿರಿ

ಜೋಗದೈಸಿರಿ

1 min
341

ಪ್ರಕೃತಿ ಸೃಷ್ಟಿತ ವಿಸ್ಮಯವೀ

ಮಲೆಸೀಮೆಯ ಮೈಸಿರಿ

ಅಚ್ಚರೋಚ್ಚರಿ ಕಣ್ಮನಮೈಗೀ

ಜೋಗದ ಚೆಲುವಿನೈಸಿರಿ

ಧರೆದೇವಿಗೆ ಆಕಾಶಗಂಗೆ

ಹಾಲಿನಭಿಷೇಕ ಗೈದಂಗೆ

ಗೋಚರಿಪುದಾಬಿಂಬವೀ ಕಣ್ಗೆ

ಬೆರೆತಖಾತ್ರಿ ನಭಧರಿತ್ರಿ

ಭೂಲೋಕದೀ ಮನುಜಂಗೆ

ಅಮರ್ದುಣಿ ಅಮೃತವತಿ

ಅಮೃತಮಂ ಧರಿಸುರಿದಂಗೆ

ಕಂಗೊಳಿಪುದು ಶರಾವತಿ

ಸವಿದು ಜೋಗದೆ ಕ್ಷೀರಸಾರದೆ

ಮಿಂದ ಮರಬಳ್ಳಿಹೂಗಳೆ

ವಾತ್ಸಲ್ಯವೆ ಕಾಣದ ನನಗಿಂತಲು

ನೀವ್ಗಳದೆಷ್ಟೊ ಸುಖಿಗಳೆ

ಸಾಲ್ಗಟ್ಟಿ ತೇಲ್ವ ಬೆಳ್ಳಕ್ಕಿಗಳೆ

ಮೇಘವೇರಿ ಸಾಗಿಹೋಗಿ

ಪಾಲೊಳು ಮಿಂದಿದ್ದಕ್ಕೇನೆ?

ಬೆಳ್ಳಿಯ ಬಿಳಿರೆಕ್ಕೆ ನಿಮಗಿ

ಚಿಲಿಪಿಲಿ ಇಂಚರದ ಪಕ್ಷಿಗಳೆ

ಹಸಿರನೆಲದಿ ಸುಧೆಯ ಜಲದಿ

ಹಾಲ್ನೀರ ಗುಟುಕಿಸಿದ್ದಕ್ಕೇನೆ?

ಪಾಲ್ಗಂದನ ಚಿಣ್ಗಂಟ ನಿಮಗೆ

ಮಂಜಿಗೂ ಮಲ್ಲೆದಂಡಿಗೂ

ಎಲ್ಲಿಲ್ಲದ ನಂಟು ಅಲ್ಲಿರೆ

ಇಬ್ಬನಿಮೈಗೆ ಇನರಶ್ಮಿ ತಾಕದಿರಲೂ

ಮಲ್ಲಿಗೆ ಮುತ್ತಿಡದೆ ತೆರೆ

ಧುಮ್ಮಿಕ್ಕುವ ರಭಸದಿ ಚಿಮ್ಮಿದ

ಕಣಕಣಹನಿ ತುಂತುರಲ್ಲು

ಸ್ಪರ್ಶವಿಲ್ಲದೆ ಸೂರ್ಯರಶ್ಮಿಯ

ಅವಿತಿದ್ದವಾ ಕಾಮನಬಿಲ್ಲು



Rate this content
Log in

Similar kannada poem from Abstract