STORYMIRROR

ಸಂತೋಷ್ ನಾಗರತ್ನಮ್ಮಾರ

Classics Inspirational Others

4  

ಸಂತೋಷ್ ನಾಗರತ್ನಮ್ಮಾರ

Classics Inspirational Others

ಅಭಿನವಶ್ರೀ

ಅಭಿನವಶ್ರೀ

1 min
635


ಹೊನ್ನರಳಿ ಶಿವನಿಚ್ಚೆ

ಚನ್ನೇಶ ಮಠದಲ್ಲಿ

ತನ್ನೊಳಗ ತೆರೆದಿಟ್ಟು ತಾಯಾದನೊ

ಅನ್ನರಿತು ಬ್ರಹ್ಮಾಗಿ

ಕಣ್ಣರಿದು ಕರುಣಿಟ್ಟು

ಮಣ್ಣಿದನ ಚಿನ್ನಿಸುವ ರಿಷಿಯಾದನೊ

ನೇಹಿತದಿ ಬಸವಣ್ಣ

ಮೋಹಿತಕೆ ಅಕ್ಕಾಗಿ

ಗೇಹದೊಳು ಸುಟ್ಟೆಸದ ಜಂಗಮಾದ

ರೂಹಿಟ್ಟ ಮದಕ್ರೋಧ

ಬಾಹಿರವ ಅಣಿದಿಟ್ಟು

ಸಾಹಸದಿ ಜಿನಗೆದ್ದ ನಗುಮೊಗದೊಳು

ಶಿವಚಂದ್ರ ಶೇಖರರ

ತವನಿಧಿಯ ಪೊಂದಿರ್ಪ

ಭುವಿಗೆಲ್ಲ ಬೆಳಗುತಿಹ ಶಿವಮಂತ್ರದೊ

ಇವನೊಳಗೆ ಅವನಿದ್ದು

ಭುವಿಸಲಹ ಅಣುರೇಣು

ಭುವಿಭಾನ ಪಂಚಭೂತರುದ್ರಯೋಗಿ

ಆಡಿದನೊ ಅಂಗಳದಿ

ಕಾಡಿದನ ಕಂಗಳಲಿ

ಮೋಡಿಯನೆ ಮಾಡಿದನ ನೇಹಿತರನು

ಕೂಡಿಕುಣಿದಾಡಿದನೊ

ಜಾಡಿಟ್ಟು ಆವಿಗೆಯ

ಕೋಡಿಮನ ತಪದೊಳಗ ಕಟ್ಟಿಸಿದನೊ

ಗಿರಿನವಿಲು ಕನಸಿಟ್ಟು

ಸಿರಿತನವು ಒಲ್ಲೆನುತ

ಮರೆತನದೊ ಹೆತ್ತೊಡಲ ಧಾರಿಣಿಗೆ ತಾ

ಅರಿವೊಂದೆ ಸಾಕೆನಗೆ

ಹರಕರುಣ ಬೇಕನೆಗೆ

ವರಬೇಡಿ ನಿಂತನೋ ಆಧ್ಯಾತ್ಮಿಯೂ

ಅಳೆಯಲ್ಕೆ ಧರ್ಮವನ

ತಳೆಸಲ್ಕೆ ಮುಕ್ತಿಯನ

ಮಳೆಸುರಿಸ ಧೇನಾದ ಯೋಗಿವರನೊ

ಸೆಳೆಯುತ್ತ ಶೈವಗಣ

ಹರಗಂಗೆ ನದಿಯಾಗಿ

ಹರಿವಿಟ್ಟು ಎದೆಹಸಿರ ಒಳನಿಂತನೊ



Rate this content
Log in

Similar kannada poem from Classics