ಹಳ್ಳಿಜನ [ಅಂಶಷಟ್ಪದಿ]
ಹಳ್ಳಿಜನ [ಅಂಶಷಟ್ಪದಿ]
ಇದ್ದುದ ಉಂಡುಟ್ಟು
ಇದ್ದಷ್ಟ ಕಾಲ್ಚಾಚಿ
ಮುದ್ದಿನ ಮಡದಿಯ ಸಂಗದೊಳು
ಸದ್ದಿಡ ಬಳೆನಾದ
ಸುದ್ದಿಯ ಕೇಳುತ
ಹೊದ್ದದು ಮಲಗಿದ ಎದೆವಂತರು
ಚಿಣ್ಣರ ಆಟಕೆ
ಬಣ್ಣದ ಮಾತಿಗೆ
ತಣ್ಣಗೆ ಸವಿದರು ಸುಡುಬಿಸಿಲ
ಉಣ್ಣುತ ಎದ್ದರ
ಮಣ್ಣಿನ ಬೆವರನೆ
ತನ್ನಯ ರೆಟ್ಟೆಯ ಕಸುವೊಳಗ
ಕಾಡುವ ವರ್ಷವ
ಮೋಡದ ಆಟವ
ನೋಡುತ ಕಾಯುವ ಮುಗ್ದರಿದೊ
ನಾಡಿನ ಸಕ್ಕದ
ನಾಡಿಯ ಮಿಡಿತದ
ಮಡಿಲಿಗೆ ಅನ್ನದ ದಾತಿವರೊ
ಎಳೆಯುತ ಅಳಿಯುವ
ಬೆಳಕಿನ ಬಸವಣ್ಣ
ನೆಲತಾಯ ಹಣತೆಯ ಗುಣದವರು
ಒಳಎದಿ ಒಳಿತಲೆ
ಹಳ್ಳಿಯ ಘನತೆಯ
ಡಿಲ್ಲಿಗೆ ಸಾರಿದ ವನಮಿತ್ರರು
ಹೆಪ್ಪಿದ ನೋವನು
ಕಪ್ಪಿದ ಮಡಿಲಿಗ-
ದೊಪ್ಪಿಸಿ ಮತ್ತದು ಕರೆದರಿನ
ಅಪ್ಪುತ ಉದಯಕೆ
ರೆಪ್ಪೆಯ ತೆರೆಯುತ
ಮುಪ್ಪನೆ ಮರೆಯತ ಕುಣಿವರಿದು