STORYMIRROR

ಸಂತೋಷ್ ನಾಗರತ್ನಮ್ಮಾರ .

Abstract Tragedy Others

4  

ಸಂತೋಷ್ ನಾಗರತ್ನಮ್ಮಾರ .

Abstract Tragedy Others

ಹಾರಿಬಿಟ್ಟ ಹಕ್ಕಿ

ಹಾರಿಬಿಟ್ಟ ಹಕ್ಕಿ

1 min
272

ಹಾರೆಲೆ ಹಕ್ಕಿಯೆ ಗರಿಗಳ ಬಿಚ್ಚುತ

ತೋರಿಸ ನಭವನ ಧರಿತಂದು

ತೂರುತ ಬಿಟ್ಟರು ಕಣ್ಣಿಯ ಸಡಿಲತ

ತಾರಗೆ ತಾಯಿಯ ತಬ್ಬೆಂದು

ರೆಕ್ಕೆಯ ಬಿಚ್ಚುತ ಸಾಗಲು ನಾನೂ

ಸಿಕ್ಕಿದೆ ಹದ್ದಿನ ಬಲೆಯಲ್ಲಿ

ಕುಕ್ಕಿತು ಬೆನ್ನನ ರಕ್ತವು ಕಾರುತ

ಬಿಕ್ಕುತೆ ಸಾಗಿದೆ ನೆಲೆ ಇಲ್ಲ

ಬಾಳಲು ಬಿಡದೇ ಸಾಯಲು ಕೊಡದೇ

ಗೋಳಿನ ಕಂಬನಿ ಮುಗಿಲಿಟ್ಟು

ತಾಳುತ ಉರಿಯನು ಜೀವವ ಸಾಗಿರೆ

ಆಲದ ಮರವದು ತಡೆದಿಟ್ಟು

ಎಲೆಗಳ ಹಸ್ತವ ಚಾಚುತ ಪೊರೆಯಿತು

ನೆಲೆಯನು ಕೊಟ್ಟಿತು ಬಾಳೆಂದು

ಸೆಲೆಸಿದೆ ನಾನದು ಮಲೆಗಳ ತಿರುಗುತ

ಗೆಲುವಿಗೆ ಬೆವರನೆ ಬಸಿತಂದು

ಎಕ್ಕುತ ಮಿಂಚಿನ ಗರಿಗಳ ತಂದದೊ

ತೆಕ್ಕಿಯ ಗೂಡನು ಕಟ್ಟಿದೆನು

ಹಕ್ಕಿಯ ಆಲದ ರೆಕ್ಕೆಯ ಮಡಿಲಲಿ

ಚಿಕ್ಕಿಯ ಅವ್ವಳ ಕಂಡೆನದೊ



Rate this content
Log in

Similar kannada poem from Abstract