ನನ್ನೊಲವೆ
ನನ್ನೊಲವೆ
ಕಣ್ಣ ರೆಪ್ಪೆಯ
ಒಳಗೆ ನನ್ನನ
ಒಮ್ಮೆ ಮುಚ್ಚಿಕೊ ಗೆಳತಿಯೆ
ಕಣ್ಣ ಕಂಬನಿ
ತಾರಲಾರೆನು
ನಿನ್ನ ಆಣೆಗು ನಾನದು
ಎದೆ ಚಿಪ್ಪೊಳ
ಒಮ್ಮೆ ಬಚ್ಚಿಕೊ
ಆಸೆ ಕನಸನ್ನಂತೂ
ಬತ್ತ ಬಿಡೆನಿದು
ಕೊಟ್ಟು ಜೀವವ
ನನ್ನ ಒಳಗಿಗೆ ಸೆಳೆವೆನು
ನಿನ್ನ ತನುವಿನ
ಬಣ್ಣ ಬಾನೊಳ
ನನ್ನ ಆಗಿಸಿಕೊ ನೀನು
ಮಳೆಯಬಿಲ್ಲನೆ
ಇಟ್ಟು ಹೆಜ್ಜೆಯ
ಏಳು ಕಟ್ಟುವೆ ಬಾಳನು
ಉಣ್ಮಿಸುವೆ ನಾ
ಸಗ್ಗ ಹಸಿರನು
ತುಟಿಗೆ ತುಟಿಯಾ ಹಚ್ಚುತ
ಮೈಯ ತುಂಬಾ
ಚುಕ್ಕಿ ಬಿತ್ತುತ
ಬಣ್ಣ ಬಾಳನೆ ಕೊನರುವೆ
ಕಣದ ನೆ
ತ್ತರ
ಹನಿಯ ಸೀಳುತ
ನಿನ್ನ ಕರಮುಟ್ಟಿ ಗೆಳತಿ
ಒಯ್ದು ಬಿಡೆನೀ
ನನ್ನ ರಕುತದ
ರಂಗ ವಲ್ಲಿಯ ಚುಕ್ಕಿಟ್ಟು
ಕಣದ ಒಳಗಿನ
ಕಣ್ಣ ಗೊಂಬೇ
ನಿನ್ನ ಎದೆಗೇ ಕಾಣಲಿ
ತಮದ ದಾರಿಯ
ದಾಟಿ ಅಡಗಿಗೆ
ಸುಟ್ಟುರಿವೆನಾ ಕಪ್ಪಿಟ್ಟು
ಗೆಳತಿ ನೀನಿದೊ
ಜೊನ್ನ ಬೆಳಗಿಗೆ
ಕುಣಿದು ಕುಪ್ಪಳಿಸತಲಿರು
ಹೊಕ್ಕು ಒಮ್ಮೇ
ನನ್ನ ಎದೆಯ
ಮುರುಕು ಗುಡಿಸಲ ನೀನೂ
ಪ್ರೀತಿ ದೀಪವ
ಹಚ್ಚಿ ಹಸನಿಸಿ
ಬಿಟ್ಟು ಬಾ ಹೆಜ್ಜೆಗುರುತು
ಮನದ ಮಲ್ಲಿಗೆ
ದಳದಿ ಒಮ್ಮೇ
ನೆಲೆಯನಿಡು ಸಾಕೆನಗದೆ