ನೆಲದ ನೆನಪು
ನೆಲದ ನೆನಪು
ಸಾಗುತಿರಲು ಬಾಳದೋಣಿ
ಮೂಗಬಸವ ನೂರಿನಲ್ಲಿ
ಹೇಗೆ ಮರೆತು ಇರಲಿ ನೆಡೆದ ನೆಲವ ನಾನದು?
ಕೂಗಿ ಕುಣಿದು ಆಡಿ ಬೆಳೆದು
ನೇಗಿಲೂಡಿ ಕುಂಟೆ ಹರಗಿ
ಬಾಗಿ ದುಡಿದು ನಿಂತ ನೆಲೆಯ ಅಜ್ಜ ಅಜ್ಜಿಯ
ಬೆವರು ಬಸಿದು ಹೊಟ್ಟೆ ಹಸಿದು
ತವರು ತಾಯ ಮಣ್ಣ ನೆಲದ
ಶಿವದ ಸೊಗಡ ನವಿಲ ಕುಣಿವ ನನ್ನ ಹಳ್ಳಿಯು
ನವತು ಒಲವ ಕಿರಣ ಬಿತ್ತಿ
ಸವಿದ ಸಗ್ಗ ಭುವಿಗೆ ಹಿಗ್ಗಿ
ಕವಿಸಿ ಕಳೆಸಿ ಕುಣಿಸಿ ಬೆಳೆಸಿ ನಗಿದ ಪರಿಯನು
ಬಸವ ಕರುಣೆ ಎನಗೆ ಸಿಕ್ಕಿ
ಬೆಸದು ಕೊಂಡ ಬಾಳನಿಕ್ಕಿ
ನಿಷೆಯ ಕಂಡು ನಮಿಸಿ ನೆಡೆದ ಬಾಳು ನನ್ನದು
ಬಸಿದು ಬೆವರ ತೇದ ಜೀವ
ಸಸಿಯ ನನ್ನ ನೆಟ್ಟು ಬೆಳೆದ
ಶಿಶಿಲ ದಲ್ಲಿ ಹೊತ್ತು ಬೆರಣಿ ಯಾತು ಯಜ್ಞಕ
ಯರೆಯ ಮಣ್ಣ ತಂದು ಹದಿಸಿ
ಕೊರೆದು ಮಾಡಿ ಎತ್ತ ನನ್ನ
ಮೆರೆಸಿ ಹೊತ್ತು ಕುಣಿದ ನೆನಪ ಮರೆವು ದೆಂತದು
ಕರೆದು ಕೈಯ್ಯ ಚಾಚಿ ನನ್ನ
ಮರೆಯ ದಂತೆ ತಬ್ಬ ಬಯಕೆ
ತೆರೆಯ ಚಿಗುರು ಪರ್ಣಕೀಗ ಹಕ್ಕಿಯಾದೆನೊ