STORYMIRROR

ಸಂತೋಷ್ ನಾಗರತ್ನಮ್ಮಾರ

Classics Inspirational Others

4  

ಸಂತೋಷ್ ನಾಗರತ್ನಮ್ಮಾರ

Classics Inspirational Others

ತೊಯ್ದ ಮುಗಿಲು

ತೊಯ್ದ ಮುಗಿಲು

1 min
725


ತಣ್ಣನೆ ಗಾಳಿಯು

ಮಣ್ಣಿನ ವಾಸನೆ

ಕಣ್ಣಿಗೆ ಸೊಬಗಿನ ಮಳೆಇತ್ತದೊ

ನನ್ನನು ಹೊತ್ತದು

ಬಣ್ಣದ ವಾಹನ

ಟಣ್ಣನೆ ನೆಗೆತಿತ್ತು ಕುದುರೆಯಂತೆ

ಹನಿಹನಿ ಮಳೆಹನಿ

ನನ್ನೊಳ ಮನದಲಿ

ನೆನಪಿನ ತುಂತುರ ಬರೆಯುತಿತ್ತು

ಏನನೊ ಗುರುಗುಟ್ಟಿ

ನನ್ನಯ ಮನವದು

ಮೌನದಿ ಕುಳಿತಿತ್ತು ಬೆನ್ನೊರಗಿ

ಮೆದುಹೆಜ್ಜೆ ಹಾಕುತ

ಸುಧೆಯಂತ ಚೆಲುವಿಕೆ

ನದಿಯಂತೆ ನೆಡೆಯುತ ಬಂದಳಾರೊ

ಎದೆಗಳ ಸೆಳೆಯುವ

ಹಾಯ್ದದೊ ಹೋಗಲು

ಮದಿಲಿನ ಮುಗಿಲದು ಮನಚಾಚಿತೊ

ಅಂಗನೆ ಸೊಬಗಿಗೆ

ಚಂಗನೆ ನೆಗೆಯುತ

ಮಂಗನ ಮನವಿದು ಎದೆತಟ್ಟಿತು

ಹೊಂಗನ ನಿದಿರೆಯ

ಕಂಗಳ ಎವೆಯನು

ಮಂಗಳ ವಾರ್ತೆನೆ ಎದೆತೆರಿತೂ

ಒಳಗಡೆ ಸಕಲರ

ಬಳಗವು ಬೆಸೆಯತ

ಕುಳಿತಿದ್ದ ಪ್ರೀತಿಗೆ ಮನತೋರಿತು

ಕುಳಿಗೆನ್ನೆ ನಗೆಯಿರ

ತೆಳುನಡ ಬಳುಕಿರ

ಬೆಳಕಿನ ಮೊಗಪುಷ್ಪ ಕಂಪರಿತೂ

ಅಂಚೆಯ ಕಳುಹಿತು

ಪಂಚದ ಇಂದ್ರರೂ

ಪಂಚಾತಿ ಎದೆಬಳಿ ಬರಬೇಕೆಂದೂ

ಹಂಚಿತು ಎಲ್ಲಕೂ

ಮಿಂಚಿನ ಹಕ್ಕಿಯ

ಗೊಂಚಲ ಅಂದವ ಸವಿತಾರೆಂದೂ

ಕಣ್ಣವು ಹೊಂಟವು

ಬಣ್ಣದ ಬೆಳಗಿನ

ಹುಣ್ಣಿವೆ ಸೊಬಗಿಯ ಕಾಣತವಕ

ಹೆಣ್ಣನು ಕಂಡವು

ಬಣ್ಣನೆ ಬರದೆಯೆ

ಬಣ್ಣದಿ ಬರೆದವು ಪಠಚಿತ್ರಕಾ

ಕಿವಿಯಿವು ಹರಿದವು

ಭುವಿಇನಿ ಆವುದೂ

ಸವಿಸೊಲ್ಲ ತರಲೆಂದು ಹಿಗ್ಗುತಲಿ

ಭುವನದ ಸುಂದರಿ

ಯವನದ ಕೋಕಿಲ

ಸವಿನುಡಿ ದನಿಯನೆ ಮೊಗೆದವದೊ

ಇನಿದನಿ ಕೇಳುತ

ಮನಕೋಣೆ ತುಂಬುತ

ಹನಿಹನಿ ಬಾನುಲಿ ವರದಿಹೊತ್ತೂ

ಇನಿಯಳ ಅಳತೆಗೆ

ಘನತೆಯ ಮೃದುತೆಯ

ಗೊನೆಸುತ ಬೆಳೆದವು ಕಲರವವಾ

ನಾಸಿಕ ಹಿಡಿದಿತು

ಮೂಸುತ ತನುಕಂಪ

ಸಾಸಿರ ದಳಕಂಜ ಅರಳಿರುವಾ

ಮೀಸೆಯ ಕುಡಿಗದು

ಆಸೆಯ ಹಾಲಂಟಿ

ಸೂಸಿತು ತೇಜವ ಗಂಧರ್ವಳ

ಸೋಕಲು ಬೆರಳದು

ನಾಕದ ಲತೆಮಿಂಚು

ಜೀಕಿಗೆ ಜೋಲಿಯ ಕಟ್ಟಿತದೂ

ಆಕೆಯ ಅರಸಿಯು

ಜೋಕೆಯ ಮಾಡೆನೆ

ಬಾಕಿಯ ಚುತ್ತಿಗೆ ಇಟ್ಟಿತದೊ

ನುಲಿದಿತು ಜಿಹ್ವೆಯು

ಸೆಲೆಯಲ್ಲ ಒಳಗೊಂಡು

ಬೆಲೆಯುಳ್ಳ ಹೆಣ್ಣಿದು ಅಳತಿಸಿತೂ

ಒಲವೆಲ್ಲ ಒಳಗೊಂಡ

ಚೆಲುವೆಲ್ಲ ಸೆಲೆಕಂಡ

ಮಲೆಸೀಮೆ ಹಸಿರೆನೆ ತೂಕಿಸಿತೊ

ಹಸಿರೊಳ ತೂರುತ

ಮಸಿಕಪ್ಪು ಥಾರಲಿ

ಹಸಿನೆಂದು ಬೈಕೊಳ ತೇಲಿದೆನು

ಹಸನ್ಮುಖಿ ಗೆಳತಿಯ

ಬೆಸೆಯಲು ತಂತ್ರವು

ಹೊಸತದಿ ಹುಡುಕುತ ಹಾರಿದೆನು

ಮಳೆಯದು ಜಿಟಿಜಿಟಿ

ಸೆಳಯಿತು ವನಗಾನ

ಫಳಫಳ ಬಿಡುತಲಿ ಕಣ್ಣೆರಡಾ

ಒಳಗಿನ ಮನದೆಲ್ಲ

ತೊಳಲಿಗೆ ಮಾರಿಯ

ಸೆಲೆಬಿಚ್ಚಿ ಮಾಯವೆ ಆದೆನಂದೂ

ಯೇರಿ ಹಾರಿದೆ ಹಸಿರೊಳ



Rate this content
Log in

Similar kannada poem from Classics