STORYMIRROR

Vinaya Gowri

Classics

2  

Vinaya Gowri

Classics

ಒಬ್ಬಂಟಿ

ಒಬ್ಬಂಟಿ

1 min
96


ಗೆಳತಿ ನೀ ಬಂದೆ 

ನನ್ನ ಬಾಳಿನ ಬೆಳಕಾಗಿ 

ದುಃಖವೇ ತುಂಬಿದ ನನ್ನ ಮನದಲ್ಲಿ. 

ಸಂತೋಷದ ಬೀಜವಾ ಬಿತ್ತಿ ಹೆಮ್ಮರವಾಗಿಸಿದೆ ;

ಗೆಳತಿ ನೀ ನಿಂದೆ 

ನನ್ನ ಬೆಂಗಾವಲಾಗಿ 

ಸೋಲಿನ ಬೇಗೆಯಲಿ ಬೇಯುತಿದ್ದಾಗ 

ಗೆಲುವಿಗೆ ಮೆಟ್ಟಿಲಾಗುವಂತೇ ನಡೆಸಿದೆ ;

ಗೆಳತಿ ನೀ ತಂದೆ 

ತಂಗಾಳಿ 

ಸಾವಿನ ಕರೆಗೆ ಓಗೊಟ್ಟು ನಡೆದಾಗ 

ಬದುಕಿನ ಹಾದಿಯಲಿ ಕರೆತಂದೆ ಒಲವಾಗಿ ;

ಗೆಳತಿ ನೀ ಗೆದ್ದೇ 

ರಜನಿಯನ್ನು 

ನಾ ಕತ್ತಲೆಯ ಕೂಪದಲ್ಲಿ ಬಿದ್ದು ಒದ್ದಾಡಿದಾಗ 

ಬೆಳಕಿನೆಡೆ ದಾರಿ ತೋರಿದಾಕೆ ;

ಆದರೆ........ 

ಈಗೇಕೆ ನೀ ಹೀಗೆ ದೂರಾದೆ? 

ಸೋಲಿನ ದುಃಖದಿ ಸಾವಿನ ಕದ ತಟ್ಟಿ 

ಕತ್ತಲಲ್ಲಿ ಮರೆಯಾದೆಯೇಕೆ? 

ಓ ಅಮೃತವರ್ಷಿಣಿ, ಓ ಮಂದಾಕಿನಿ, 

ನೀನೆಲ್ಲಿ ಮರೆಯಾದೆ? 

ಈ ಜನ್ಮದಲಿ ಇನ್ನೆಲ್ಲಿ 

ನಾನಿನ್ನ ಹುಡುಕಲಿ? 

ಓ ಅಂತರ್ಯಾಮಿನಿ 

ನೀನಿಲ್ಲದೆ ನಾನಾದೆ ಒಬ್ಬಂಟಿ :



Rate this content
Log in

Similar kannada poem from Classics