STORYMIRROR

Shiqran Sharfuddin

Classics

2  

Shiqran Sharfuddin

Classics

ಗಜಲ್

ಗಜಲ್

1 min
115

ಔತಕಂಠ್ಯತೆಯಲ್ಲೂ ನೀನೇ, ಔತ್ಸುಕ್ಯತೆಯಲ್ಲೂ ನೀನೇ, ಔದಾಸೀನ್ಯತೆಯಲ್ಲೂ ಕಾಟ ನಿನ್ನದೇ!

ಬಯಲಿನಲ್ಲೂ ನೀನೇ, ಆಲಯದಲ್ಲೂ ನೀನೇ, ಕನಸ್ಸಿನಲ್ಲೂ-ಮನಸ್ಸಿನಲ್ಲೂ ಕಾಟ ನಿನ್ನದೇ!



ನಿದ್ರೆವಿಲ್ಲದ ರಾತ್ರಿಗಳು ಕಳೆದವು, ಆ ಒಬ್ಬಂಟಿತನದಲ್ಲೂ ಕಾಟ ನಿನ್ನದೇ!

ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ!


ವಾಸ್ತವಿಕತೆಯಿಂದ ಮುಕ್ತಿ ಪಡೆಯಲು ಕುಂತೆ, ಗಜಲೋಂದನ್ನು ಬರೆಯಲು.

ಆದರೆ, ವಶ್ಯಸುಪ್ತನಾಗಿ ಸಾಲುಗಳಿಗೆ ಪ್ರಾಸ ಹೆಣೆಯುವಾಗಲೂ ಕಾಟ ನಿನ್ನದೇ!


ವಿಮೋಚನೆಗಾಗಿ ನಿರ್ಧರಿಸಿದೆ ಲೌಕಿಕತೆ ತ್ಯಾಗಿಸಿ ಜೋಗಿಯೇ ಆಗಲು. ಆದರೆ,

ತನದಲ್ಲೂ ನೀನೇ, ಮನದಲ್ಲೂ ನೀನೇ, ವನಪ್ರಸ್ತಾಶ್ರಮದಲ್ಲೂ ಕಾಟ ನಿನ್ನದೇ!



ಜನರಿಂದ ಹೊರ ನಡೆದೆ- ಕ್ಷಣಗಳ ನೆಮ್ಮದಿ ಪ್ರಾಪ್ತಿಸಲು. ಆದರೆ,

ಓ ಹಳೆ ನೆನಪುಗಳೇ, ನೆಮ್ಮದಿಯ ಮಾರ್ಗದಲ್ಲೂ ಕಾಟ ನಿನ್ನದೇ 


Rate this content
Log in

Similar kannada poem from Classics