ಗಜಲ್
ಗಜಲ್

1 min

238
ಅತೀಯಾದ ನಿರೀಕ್ಷೆಗಳು ನೇಣಿನಂತೆ ಕಾಡತೊಡಗಿದವು!
ನೀಡಿದ ವಚನಗಳು, ಹಳೆ ನೆನಪುಗಳು ಕಾಡತೊಡಗಿದವು!
ಒಂಟಿತನದ ನಿಷ್ಶಬ್ಧತೆಯಲಿ ಶಾಂತನಾಗಿ ಬದುಕಬಹುದಿತ್ತು;
ನೆನಪುಗಳ ನಿಂದನೆಗಳು ಆಲೋಚನೆಗಳಾಗಿ ಕಾಡತೊಡಗಿದವು
ರಾತ್ರಿಯಲಿ ತಾರೆಗಳು ಮಿಂಚುವುದೆಂದು ನಂಬಿದೆ. ಆದರಿಂದು,
ಕಗ್ಗತ್ತಲಿರುವ ಭವಿತವ್ಯದ ಆತಂಕಗಳು ಕಾಡತೊಡಗಿದವು...!
ಪ್ರಸ್ತುತ ಸ್ಥಿತಿಯನು ನಗುನಗುತ ಎದುರಿಸಬಹುದಿತ್ತು. ಆದರೆ,
ಅಸಹನೀಯ ಕಹಿ ನೆನಪಿನ ಹೊರೆಗಳು ಕಾಡತೊಡಗಿದವು!