ಗಝಲ್
ಗಝಲ್
1 min
2.9K
ಗಳಿಸಿದೆಲ್ಲವನ್ನು ಕಳೆದುಕೊಂಡು ನಾ ಶ್ರೀಮಂತನಾದೆ !
ಶಾಂತಿಯ ನಿದ್ರೆಯನು ಮತ್ತೇ ಪಡೆದು ನಾ ಶ್ರೀಮಂತನಾದೆ !
ಗಳಿಸಿದ ಸಫಲತೆಗಳು ಕಳೆದು ಹೋಯಿತು ಕಣ್ಣು ಮಿಟುಕುವುದರಲ್ಲಿ,
ಲೌಕಿಕತೆಯ ನೈಜತೆಯನ್ನು ಅರಿತು ಮತ್ತೇ ನಾ ಶ್ರೀಮಂತನಾದೆ !
ಶ್ರೀಮಂತಿಕೆಯೊಂದಿಗೆ ಏರಿತು ವೈರಿಗಳ ಸಂಖ್ಯೆಯೂ
ವೈರಿಗಳ ವೈರಿತ್ವದಿಂದ ಪಾರಾಗೀಗ ನಾ ಶ್ರೀಮಂತನಾದೆ !
ನಷ್ಟವೆಂಬುವುದು ಕಷ್ಟವೆಂದುಕೊಂಡು ವಿರಸಗೊಂಡಿದ್ದ ತಪ್ಪಿಗೆ
ನಷ್ಟವೆಂಬ ವಿಷಕಾರಿ ರಸದೌತಣ ಭೋಜಿಸಿ ನಾ ಶ್ರೀಮಂತನಾದೆ!