Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shiqran Sharfuddin

Romance Others

4.3  

Shiqran Sharfuddin

Romance Others

ಗಜಲ್

ಗಜಲ್

1 min
298


ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು

ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು 


ಖೇದವಿದೆ ಸಾಧಿಸಲಾಗಲಿಲ್ಲ ನನಗೆ, ದೊರೆತ ಈ ಪ್ರಾಪಂಚಿಕ ಬದುಕಿನಲಿ

ಆ ಖೇದದ ಅಗ್ನಿಯೂ ನಂದಿಸಲಾಗುವುದು, ಮತ್ತೇ ಭೇಟಿಯಾದರೆ ನೀನು 


ಈ ಲೌಕಿಕ ಒತ್ತಡಗಳು, ಖಿನ್ನತೆ-ತಳಮಳಗಳು, ಭವಿತವ್ಯದ ಆತಂಕಗಳು...

ಎಲ್ಲವನು ನಗುನಗುತಾ ಎದುರಿಸಲಾಗುವುದು, ಮತ್ತೇ ಭೇಟಿಯಾದರೆ ನೀನು 


ಬರಿದು ಹೋಯಿತು ವಸಂತಗಳು, ಮನಸ್ಸಿನಂಗಳದಿಂದ ನಿರ್ದಯವಾಗಿ 

ಪುಷ್ಪಗಳು ಚಿಗುರುವ ಋತು ಮರಳುವುದು, ಮತ್ತೇ ಭೇಟಿಯಾದರೆ ನೀನು!


Rate this content
Log in

Similar kannada poem from Romance