STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಒಂದಿರುಳು

ಒಂದಿರುಳು

1 min
669


ಹನ್ನೆರಡು ಗಂಟೆಯು ಬಾರಿಸಿತು ಗೋಡೆಮೇಲಿನ ಗಡಿಯಾರ 

ನಾನೇ ಹೆಣೆದು ಚಿತ್ತಾರ ಮಾಡಿದ್ದೆ ದಿಂಬಿಗೆ ಕಯ್ಯಾರ 

ಕಡಿದರೂ ನಿದ್ದೆ ಬಾರದು ಕಣ್ಣು ತೆರೆದೇ ಇದ್ದೆ 

ಮುಗಿಲ ಚಂದ್ರ ನನ್ನ ಚಡಪಡಿಕೆ ಕಂಡು ನಗುತಲಿದ್ದ ಮನಸಾರ 


ಹಿಂದಿನ ರಾತ್ರಿ ಸವಿ ಗಳಿಗೆಯಲ್ಲಿ ಇನಿಯನಿದ್ದ ಪಕ್ಕದಲ್ಲಿ 

ತುಂಟಾಟ ನಡೆದಿತ್ತು ಇಡೀ ರಾತ್ರಿ ಯಲ್ಲಿ 

ಮುಸಿ ಮುಸಿ ನಗು ಪಿಸು ಮಾತಿಗೆ ಎಚ್ಚರ ಗೊಂಡ ಅಪ್ಪ 

ನುಡಿಯಲಾಗದೆ ಬೆಪ್ಪಾಗಿ ಹೊರ ಮಲಗಿದ ಚಳಿಯಲ್ಲಿ 

ಬೆಳಗಾಗೆದ್ದು ಯಾರ ಮುಖವೂ ಕಾಣದಾದೆ ನಾಚಿಕೆಯಲ್ಲಿ 


ಚೆನ್ನಿ ಬಂದವಳೇ ಕೇಳಿದಳು ಗಾಭರಿಯಿಂದ " ಯವ್ವೀ ಏನಾಯಿತು ಚೆಂದದ ಕೆನ್ನೆ " ಎಂದು ಮುದದಿಂದ 

ಏನೂ ಅರಿಯದವಳಂತೆ ಓಡಿ ನೋಡಿದೆ ಕನ್ನಡಿಯಲ್ಲಿ 

ಕೆನ್ನೆ ಕೆಂಪೇರಿತ್ತು ಕಣ್ಣು ರಂಗಾಗಿತ್ತು ಮೊಗದಲ್ಲಿ 

ಉತ್ತರ ಹೇಳದೆ ಹೋದೆ ಮಾತಲ್ಲಿ 


ಶುಕ್ರವಾರ ಅತ್ತೆ ಮನೆಗೆ ಕಳಿಸಲೊಪ್ಪದ ಅಮ್ಮ

ಇನಿಯನ ಕಣ್ಣಿಗೆ ಅವಳಾದಳು ಗುಮ್ಮ.

ಹುಸಿಕೋಪದಿ ಹೊರ ನಡೆದವನ 

ತಡೆದು ನಿಲ್ಲಿಸಿತು ನನ್ನ ಮನ , ಒಂದು ದಿನ ಉಪವಾಸ 

ಮುಂದಿನ ದಿನಕ್ಕೆ ಹಬ್ಬವಲ್ಲವೇ ಎನ್ನುವಷ್ಟರಲ್ಲಿ ನಾ ಬಂಧಿಯಾಗಿದ್ದೆ ಅವನ ಬಾಹುಗಳಲ್ಲಿ 


ಪಕ್ಕದಲ್ಲಿ ಇಂದು ಅವನಿಲ್ಲ ಒಬ್ಬಳೇ ಮಲಗಲು ಮನಸ್ಸಿಲ್ಲ 

ಶಾಸ್ತ್ರ ಸಂಪ್ರದಾಯ ಬಿಡುವಂತೆ ಇಲ್ಲ 

ನವ ವಧು ವರರಿಗೆ ಈ ಕಷ್ಟ ತಪ್ಪಿದ್ದಿಲ್ಲ 

ಅತ್ತಿತ್ತ ಹೊರಳಾಡಿ ಮೈ ಮುರಿದವಳಿಗೆ ನಿದ್ದೆ ಹತ್ತಿತು,

ತಿಳಿಯಲೇ ಇಲ್ಲ ಆಗಲೇ ಮುಂಜಾನೆ ಹೊಂಬೆಳಕು ಹರಡಿತು. 

ಕಾರಿನ ಶಬ್ದ ಅಚ್ಚರಿ ತಂದಿತು, ಇನಿಯನ ದರುಷನವಾಗಿತ್ತು. 




Rate this content
Log in

Similar kannada poem from Romance