STORYMIRROR

Surabhi Latha

Classics Inspirational Others

4  

Surabhi Latha

Classics Inspirational Others

ಕಾಡುವ ನೆನಪು

ಕಾಡುವ ನೆನಪು

1 min
546

ಧೋ ಎಂದು ಸುರಿದಿಲ್ಲ ಮಳೆ 

ಸೋಂಯ್ ಎಂದು ಬೀಸಿಲ್ಲ ಗಾಳಿ 

ಸುಡುವ ಗಾಢ ಬಿಸಿಲಿನಲ್ಲಿ 

ಉರಿವ ಸಣ್ಣ ಗುಳ್ಳೆಯಂತೆ 

ಕಾಡುತಿದೆ ಹೀಗೇಕೆ 'ನಿನ್ನ ನೆನಪು' 


ಚಂದ್ರ ನಿರುವ ರಾತ್ರಿ ಯಲ್ಲ 

ದುಂಬಿ ಕರೆವ ಮಾಸವಲ್ಲ 

ಗವ್ ಎಂಬ ಕತ್ತಲ ಹಿತ್ತಲಲ್ಲಿ 

ಮನವರಳಿಸುವ ತಾಣವಿಲ್ಲ 

ಚುಚ್ಚಿದಂತೆ ಮುಳ್ಳ ಬಳ್ಳಿ ' ನಿನ್ನ ನೆನಪು' 


ಎದೆಯೊಳಗೆ ಹೊಸ ರಾಗವಿಲ್ಲ 

ಒಲವಲಿ ಬರೆದ ಕವಿತೆ ಸಾಲಲ್ಲ 

ಬಳಿ ಸಾರಿ ಕಣ್ಣ ಕಾಣುವ ತವಕವಿಲ್ಲ 

ಕಳೆದ ಕ್ಷಣದ ನೆನಪು ಬೇಕಿಲ್ಲ 

ಆದರೂ ಚಿತ್ರದಂತೆ ಸುಳಿವ' ನಿನ್ನ ನೆನಪು' 


ತಿಳಿ ಬಿಸಿಲೊಳು ಸ್ಪರ್ಧೆಯಂತೆ ಕಾರ್ಮುಗಿಲು 

ಒಟ್ಟೊಟ್ಟಿಗೆ ಮೂಡಿ ಬಂತು ಕಾಮನಬಿಲ್ಲು 

ದಣಿದ ಒಡಲಿಂದ ಸುರಿವ ಬೆವರು 

ಒಂದಕ್ಕೊಂದು ಸಂಬಂಧವಿರದೇ 

ಕೊಲ್ಲುವಂತಿದೆ ಹಾಳು 'ನಿನ್ನ ನೆನಪು' 



Rate this content
Log in

Similar kannada poem from Classics