ಕೊರಗು
ಕೊರಗು
ಕಡೆ ಗಣಿಸಿ ಕೂರಬಹುದೇ ಹೀಗೆ ನೀನು
ಮಾತು ಆಡದೆ ಮೌನದಿ ಕೊಲ್ಲುವೆ ಏನು
ಮುಗ್ದ ಹೃದಯಕೆ ಕಲ್ಲು ತೂರುವುದು ಸರಿಯೆ
ಕಣ್ಣ ಕಂಬನಿ ಎದೆಯ ತೋಯ್ದಿರಲು
ಕರುಣೆ ಮರೆತು ಕಾಣದಂತಿರುವೆ
ಪರಿ ಪರಿಯಲಿ ಪದುಮ ನಿನ್ನ ಬೇಡಿರಲು
ಚೆಂದದಲಿ ಕುಂದು ಬರದಂತೆ ಪೂಜಿಪೆನೆ
ಸುಂದರಾಂಗ ನಿನ್ನೊಲುಮೆಯ ಹರಿಸೆ
ಪದ ಪುಷ್ಪವ ಪಾದಕೆ ಸಮರ್ಪಣೆ
ನೀನಿರದೆ ನಾನಿರೆ ಮಾಧವ ನಿನ್ನಾಣೆ
ಒಡಲ ತಾಪವು ಅತಿಯಾಗಲು ಸಹಿಸದಾದೆ
ನೀರಿರದ ಕಡಲ ಮೀನಂತಾದೆ
ಉಸಿರಿನಲಿ ಅಡಕ ವಾಗಿಹುದು ನಿನ್ನೊಲವು
ಹವಳದಂತಹ ಅಧರದಲಿ ನನ್ನೆಸರು ಉಲಿಯಲಿ
ಜನುಮವಿದೊ ಪಾದದಲಿ ಲೀನವಾಗಲಿ