ಮೋಹಕ ಮುರುಳಿ
ಮೋಹಕ ಮುರುಳಿ
ಮಾಧವನ ಕೊಳಲಿಗೆ
ರಾಧೆಯು ನಲಿದಳು ಯಮುನೆಯ ತಟದಲಿ.
ಕೃಷ್ಟನ ಮೋಹಕ ಮಾತಿಗೆ ಬೆರಗಾದಳು ರಾಧೆಯು ಮುದದಲಿ/.
ಗೋಪಿಯರ ಜೊತೆ ಜೊತೆಯಲಿ ರಾಧಾ ಮಾಧವ ನರ್ತಿಸೆ ಗೋಕುಲದಿ.
ಯಶೋಧಾ ಕಂದನ ಲೀಲೆಯ ಕಂಡು ಕಣ್ತುಂಬ ಆಸ್ವಾದಿಸೆ
ರಾಧೆಯು ಚಂದದಿ /.
ಪಿಳ್ಳಂಗೋವಿಯ ನಾದದಿ ಅಮರ ಪ್ರೇಮವ
ಪಸರಿಸಿದ ಜಗದಲಿ/.
ರಾಧ ಕೃಷ್ಣರ ಅಮರ ಪ್ರೇಮ ಮನಸ್ಥಿತಿಯ ನಿಜಕನ್ನಡಿ ಎಂದೆಂದೂ.
ರಾಧೆಯ ಕರೆಗೆ ಮೋಹದಿ ಸ್ಪಂದಿಸಿದ ಜಗ ಪರಿಪಾಲಕ
ತಾ ಎಂದು/.
ಚೆಲುವು ಒಲವು ಪ್ರೇಮ ರಾಗದ ಅಚಲ ವಿಶ್ವಾಸ ಬಾಳಲಿ ಎಂದೆಂದೂ.
ರಾಧೆಯ ಭಾವ ತರಂಗ ಅನುರಾಗ ಬಂಧ ಅರಿತ
ಶ್ರೀಕೃಷ್ಣ/
ಗೀತೆಯ ಸಾರ ಜಗಕೆ ಧಾರೆ ಎರೆದ ಜಗದ್ದೋದ್ದಾರಕ ಶ್ರೀಕೃಷ್ಣ//.

