ಒಂದಿರುಳು ಕಾಡಿತ್ತು!!!!
ಒಂದಿರುಳು ಕಾಡಿತ್ತು!!!!
ಒಂದಿರುಳು ಕಾಡಿತ್ತು
ನಿನ್ನ ಮುಂಗುರುಳೇ ನಾಚಿತ್ತು
ಅಂಗಳದೊಳಗಿನ ನಿಂತ ಮಳೆ ನೀರು
ಚಂಗನೆ ಚಿಮ್ಮಿ ಮೈಯೆಲ್ಲ ನವಿರು
ಹೆಂಚಿನಾವರಣದಲ್ಲಿ ಜೋಕಾಲಿ
ಮೆಲ್ಲಮೆಲ್ಲನೆ ತೂಗುತಿತ್ತು
ಮಂಚಕಾತು ಕುಳಿತವಳ ಕಾಲು
ಸೀರೆಯಂಚಲೇ ಕುಣಿದಿತ್ತು
ಕಿಣಿಕಿಣಿಸುವ ಹೊಂಬಳೆಯ ನಾದ
ಗಿಲಿಗಿಲಿಸುವ ಕಾಲ್ಗೆಜ್ಜೆಯ್ಯುನ್ಮಾದ
ಸೆಳೆತಂದಿತ್ತು ನನ್ನ ಅದಾವ ಮೋದ
ಸೆರಗಲೇ ಸೆರೆಯಾಗಿಸಿ ಕಾಡಿತ್ತು
ಕತ್ತಲಿನ ಮರೆಯಲ್ಲಿ ಚಂದ್ರಿಕೆಯಂತೆ
ಹಿತ್ತಲಿನ ನೆರಳು ಮುಂಗುರಳಂತೆ
ಸುತ್ತಲಿನ ನಿರ್ಜನತಾಣ ಏಕಾಂತ
ಮತ್ತಿನಲಿ ನನ್ನವಳು ದೇವಕನ್ಯೆಯಂತೆ
ಹತ್ತಿರ ಬರಲಾಸೆಯುಂಟು ಆದರೆ,
ಬಿತ್ತರಿಸಲಾರೆ ಮನದ ಬಯಕೆ
ಕತ್ತರಿಸಿಕೊಂಡರೆ ಸಂಬಂಧವನೇ
ತತ್ತರಿಸಿಹೋಗುವೆನಾ ಚೆಲುವೆ
ಒತ್ತರಿಸಿ ಜಿನುಗವ ಪ್ರೀತಿ ಒರತೆ
ಎದೆತುಂಬಿ ಏನೋ ಕೊರತೆ
ತಬ್ಬಿ ಮುದ್ದಿಸುವಾಸೆ ವನಿತೆ
ಒಮ್ಮೆ ನನ್ನತ್ತ ನೋಡೆ ಕಾಂತೆ...