ಶೀರ್ಷಿಕೆ : ನೆನಪಿನಂಗಳದಲ್ಲಿ ಮುಸ್ಸಂಜೆ
ಶೀರ್ಷಿಕೆ : ನೆನಪಿನಂಗಳದಲ್ಲಿ ಮುಸ್ಸಂಜೆ
ನನ್ನಾಕೆಯ ನೋಟಕ್ಕೆ ಒಳಗಾಗಿ ಹೋದೆನು
ಮಮತೆ ಪ್ರೀತಿ ಸ್ನೇಹವನ್ನು ಗಳಿಸಿಕೊಂಡೆನು
ಆಗಸದ ಚಂದ್ರನಂತೆ ಹೊಳೆಯುತ್ತಾ ಇರುವಳು
ಮಲಗಿಕೊಂಡಾಗ ಬಂದು ನನ್ನೇ ಕಾಡುವಳು
ಸೌಂದರ್ಯ ವರ್ಣಿಸಲು ಆಗುವುದಿಲ್ಲ
ಮಲಗಿಕೊಂಡರು ನಿದ್ದೆಯು ಬರುವುದಿಲ್ಲ
ಜೊತೆಯಲ್ಲಿ ಜಗಳವನ್ನು ಮಾಡುವುದಿಲ್ಲ
ಒಂದು ಕ್ಷಣವನ್ನು ಬಿಟ್ಟು ಇರುವುದಿಲ್ಲ
ದೇವಲೋಕದಿಂದ ಬಂದ ಚೆಲುವೆ
ನನ್ನ ಎಷ್ಟು ಬೇಗವಾಗಿ ನನ್ನ ಮರೆವೆ
ನನ್ನ ಹಸ್ತದಿಂದ ನಿನ್ನನ್ನು ಕರೆಯುವೆ
ಇದ್ದರು ಸಂತಸ ಸುಖದಿಂದ ಹಾರೈಸುವೆ
ನೆನಪಿನಂಗಳದಲ್ಲಿ ಮುಸ್ಸಂಜೆಯಾಗಿ ಬೆಳಗು
ನೀನೇ ನನ್ನಯ ಮುದ್ದಿನ ಪ್ರೀತಿಯಾದ ಮಗು
ನೀನು ಯಾವಾಗಲೂ ನನ್ನಲ್ಲಿ ಬೇಕು ಆ ನಗು
ನನ್ನ ನೆನಪಿನಂಗಳದಲ್ಲಿ ವಿವಾಹವನ್ನು ಆಗು

