STORYMIRROR

B K Hema

Abstract Romance Classics

4  

B K Hema

Abstract Romance Classics

ಬೆಳದಿಂಗಳು

ಬೆಳದಿಂಗಳು

1 min
348

ಉದಯಿಸಿದ ಶಶಿಧರನು ಚೆಲ್ಲುತಾ ಬೆಳಕ

ಪಡುವಣದಿ ಹರಡಿಹನು ತಂಪಾದ ಬೆಳಕ

ಮನದಲ್ಲಿ ತೋರಿಹನು ಸತ್ಯದ ಬೆಳಕ

ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ


ಚುಕ್ಕಿಗಳ ಚಿತ್ತಾರ ಆಕಾಶದಲಿ

ಹಾಲ್ಗಡಲ ವಿಸ್ತಾರ ಭೂಮಿಯಲಿ

ಸಿಹಿ ಮಧುರ ಭಾವ ಮನದಲ್ಲಿ

ಮೈ ಮರೆಯಿತು ಲೋಕ ಪ್ರೇಮದಲಿ


ಪ್ರೇಮಿಗಳ ಮನದಲ್ಲಿ ಮಧುರ ಭಾವ

ಕಾದಿಹರು ಬೆರೆಸಲು ಜೀವಕ್ಕೆ ಜೀವ

ನರಳಿಹರು ತಿನ್ನುತಲಿ ಸಿಹಿಯಾದ ನೋವ

ಹುಣ್ಣಿಮೆಯ ಚಂದಿರನೇ ಪ್ರೇಮಿಗಳ ಜೀವ


ನಲ್ಲೆ ನೋಡುತ ನಿನ್ನ ಮೈಮಾಟ

ಬೆರಗಾಗಿಹ ಚಂದಿರನು ಬೆರೆಸುತ ನೋಟ

ಮಾಡಿಹುದು ಮೋಡಿ ಬೆಳದಿಂಗಳ ಕೂಟ

ನಮ್ಮಯ ಬದುಕಲಿ ದೈವದ ಆಟ


ಕಂದನ ಪಾಲಿಗೆ ಮಾಮ ನೀನು

ಪ್ರೇಮಿಗಳ ಪಾಲಿಗೆ ಜೀವ ನೀನು

ವಿರಹಿಯ ಪಾಲಿನ ನೋವು ನೀನು

ಕಳ್ಳನ ಪಾಲಿಗೆ ಶತ್ರು ನೀನು



Rate this content
Log in

Similar kannada poem from Abstract