STORYMIRROR

B K Hema

Others

2  

B K Hema

Others

ಹೊಸ ವರ್ಷ

ಹೊಸ ವರ್ಷ

1 min
157

ಬಂದಿತ್ತು ಇಪ್ಪತ್ತು ಇಪ್ಪತ್ತು

ತಂದಿತ್ತು ಜೀವಕ್ಕೆ ಕುತ್ತು

ಕೊರೋನ ಹೆಮ್ಮಾರಿಯ ನಮಗಿತ್ತು

ಕಳೆದು ಹೋಯಿತು ಬೇಸತ್ತು


ತನ್ನಿಷ್ಟದಂತೆ ಆಡಿಸಿತು ವಿಧಿ ಆಟ

ಮಾಯೆಯ ಮೋಹದಲಿ ಮಾಡಿತು ಮಾಟ

ಸಾಕಿನ್ನು ಇದರ ಕಾಟ

ಕಲಿಸಿಹುದು ನಮಗೆ ಸಾಕಷ್ಟು ಪಾಠ


ಬಂದಿಹುದು ಇಪ್ಪತ್ತು ಇಪ್ಪತ್ತೊಂದು

ಖುಷಿಯಾಗಿರಲಿ ಜೀವನ ಎಂದೆಂದೂ

ಕಷ್ಟಗಳ ಮರೆಯುತ ನಾವೆಂದೂ

ಹಂಚೋಣ ನಲಿವನ್ನು ಮುಂದೆಂದೂ


Rate this content
Log in