Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

B K Hema

Tragedy

4.3  

B K Hema

Tragedy

ಸಾವು

ಸಾವು

1 min
239


ಸಾವೆಂದರೇನು ?

ದೇಹದ ಕೊನೆಯುಸಿರೆ

ಚೇತನದ ಅಚೇತನವೆ

ಸ್ಮೃತಿಯ ವಿಸ್ಮೃತಿಯೆ

ಅರಿವಿನ ಮರೆವೆ

ಭ್ರಮೆಯ ವಿಭ್ರಮೆಯೆ

ಆಸೆಗಳ ನಿರಾಸೆಯೆ

ಚಲನೆಯ ಜಡತ್ವವೆ

ಕನಸುಗಳ ಚಿರನಿದ್ರೆಯೆ

ಮರ್ತ್ಯ ಲೋಕದಿಂದ ದೇವಲೋಕದ

ಕಡೆಗೆ ಪಯಣವೆ

ಭವಸಾಗರದ ಬಿಡುಗಡೆಯೆ

ಅಥವಾ ಆತ್ಮದ ಮರು ಹುಟ್ಟೆ

ಓ ಸಾವೇ, ನಿನ್ನ ಒಳಾರ್ಥ

ಗೂಢಾರ್ಥಗಳೇನೇ ಇರಲಿ

ಕುಟುಂಬದ ಪಾಲಿಗೆ ಮಾತ್ರ

ನೀನೊಬ್ಬ ಸ್ವಾರ್ಥಿ, ಧೂರ್ತ


(ಕೋವಿಡ್ ಮಹಾಮಾರಿಗೆ ಬಲಿಯಾದ ಆತ್ಮೀಯರಿಗೆ ಸಮರ್ಪಣೆ)


Rate this content
Log in

Similar kannada poem from Tragedy