STORYMIRROR

Arjun Maurya

Abstract Tragedy Classics

4  

Arjun Maurya

Abstract Tragedy Classics

ನೆರಕೆಯ ಹಾಡು

ನೆರಕೆಯ ಹಾಡು

1 min
309

ಬಿರುಗಾಳಿ ಮಳೆಯ ಅಬ್ಬರದ ನಡುವೆ

ಆ ಹಾಡಿ ನೆರಕೆ ಸೋರದಿರುವ ಎಡೆ

ಕುಳಿತ ಕಾಳನು ಬೆದರುತ್ತಿದ್ದನು 


ಎಡೆಬಿಡದೆ ಸುರಿವ ಮಳೆಗೆ ಗಾಳಿಗೆ

ನಡುನಡುಗುತ್ತಾ ಕೊರೆವ ಚಳಿಗೆ

ಮುದುರಿ ಕುಳಿತು ನಡುಗಿದನು


ಕಾಡಿಗೆ ಕಾಡೇ ಹರಿಯುತಿದೆಯೋ

ಹಾಡಿಗೆ ಹಾಡೇ ಬೀಳುತ್ತಿದೆಯೋ

ಎನ್ನುತ್ತಾ ಭಯದಿ ಚಿಂತಿಸುತ್ತಿದ್ದ


ಸೌದೆಯೂ ಇಲ್ಲ ಒಲೆಯೂ ಇಲ್ಲ

ಅಪ್ಪ-ಅಮ್ಮನಂತೂ ಇನ್ನೂ ಬಂದಿಲ್ಲ

ನಿರೀಕ್ಷೆ ಹೊತ್ತ ಹೊಟ್ಟೆಗೆ ಏನೂ ಇಲ್ಲ


ಹೊತ್ತು ಮುಳುಗಿ ಕತ್ತಲಾದರೂ

ಯಾರೂ ಬರದೆ ಹೆದರಿದ ಕಾಳ

ದೀಪವಾರಲು ಕುಣಿಯುತ್ತಲಿತ್ತು


ಎಲ್ಲೋ ಬೀಸಿದ ಜೋರಾದ ಗಾಳಿ

ಗುಡಿಸಿಲಿನೊಮ್ಮೆ ಅಲುಗಾಡಿಸಿತು ನೋಡಿ

ಒತ್ತರಿಸುತ್ತಿದ್ದರೂ ಬರದ ನಿದ್ದೆ


ತರಬಹುದೇನೋ ಸೌದೆಯ ಕಟ್ಟು

ಮತ್ತೆ ಹೊಟ್ಟೆಗೊಂದಷ್ಟು ಹಿಟ್ಟು

ನಿರೀಕ್ಷೆಯೊಡಲ ಕಣ್ಣುಗಳು


ಕಗ್ಗತ್ತಲ‌ ನೆರಕೆಯ ಒಳಗಿನ

ಹರಿದ ಕಣ್ಣೀರ ಒರೆಸಲು

ಇನ್ನೂ ಬರದ ಅಪ್ಪ ಅಮ್ಮ


ಸೊರಗಿದ ನೆರಕೆಗೆ ಸಾಂತ್ವನ

ವೇಳಲು ಬರದ ನಾಯಕನು

ಮಳೆಗಾಳಿಯು ಅಡ್ಡಿ ಅಂದನು


ಕಾಳನು ಕೊಟ್ಟ ಕಂಬಳಿ ರಕ್ಷೆಗೆ

ಒದ್ದೆಯು ಆಗದ ಪುಸ್ತಕಗಳು

ನಾಳಿನ ನಂಬಿಕೆ ಉಳಿಸಿದವು


Rate this content
Log in

Similar kannada poem from Abstract