ಬದಲಾಗದಿರು ಗೆಳೆಯ
ಬದಲಾಗದಿರು ಗೆಳೆಯ
ಬದಲಾಗದಿರು ಗೆಳೆಯ
ಯಾರೋ ಹೊಗಳುತ್ತಾರೆಂದು
ಅಥವಾ
ತೆಗಳುತ್ತಾರೆಂದು |
ಸ್ಥಿತಪ್ರಜ್ಞನಾಗು
ಜೀವನವಲ್ಲವೇ?!
ಇದ್ದದ್ದೇ
ಹಾವು ಏಣಿಯಾಟ
ಎರಗಬಹುದು
ನೋವುದುಮ್ಮಾನಗಳು
ಸಮಸ್ಯೆಗಳ ದೊಡ್ಡ ಅಲೆಗಳು ಕೊನೆಗೊಮ್ಮೆ ಸಾವು |
ಬರಲಿ ಬಿಡು
ಜೀವಿಗಳಲ್ಲವೇ ನಾವು?!
ದೂರವಾಗಬಹುದು
ನಿನ್ನೆತ್ತವರೂ..!
ತೆರಳಬಹುದು
ನೆಪ ಹೇಳಿ
ನಿನ್ನ ಜೀವ ಸಖಿ ..! ಸೋಲಿಸಬಹುದು
ಸಾಯಿಸಲೂಬಹುದು
ಹಂತಹಂತದಲ್ಲಿ
ನಂಬಿದವರು |
ಬದಲಾಗದಿರು ಗೆಳೆಯ ||
