Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Action Classics Others

4  

Prabhakar Tamragouri

Action Classics Others

ಆಶ್ಚರ್ಯವಾಗುತ್ತದೆ.........

ಆಶ್ಚರ್ಯವಾಗುತ್ತದೆ.........

1 min
425



ಮುಂಜಾನೆಯಷ್ಟೇ ಬಿದ್ದ ಮಂಜು ಹನಿ 

ಸೂರ್ಯನ ಎಳೆ ಬಿಸಿಲಿಗೆ 

ಮುತ್ತಿನಂತೆ ಹೊಳೆಯುತ್ತಾ 

ಮುಟ್ಟಿದರೆ ಬೊಗಸೆಯಲ್ಲುಳಿಯದೆ 

ನುಣುಚಿ , ಕೆಳಜಾರಿ ಬಿಸಿಲು ಹೊತ್ತೇರಿದಂತೆ 

ಕರಗಿ ಮಾಯವಾಗಿ ಇಳಿ ಹೊತ್ತಿನಲ್ಲಿ 

ಪುನಃ ನಕ್ಕು ನಲಿಯುವ ಸಂಭ್ರಮಕೆ 

ಆಶ್ಚರ್ಯವಾಗುತ್ತದೆ ......


ಒಣಗಿ , ಇದ್ದಲ್ಲೇ ಉದುರಿ ಬೀಳುತ್ತಾ 

ಬಿದ್ದಲ್ಲೇ ಚಿಗುರುತ್ತಾ , ಬೆಳೆಯುತ್ತಾ 

ಮೈತುಂಬಾ ಟಿಸಿಲೊಡೆದು ಮೊಗ್ಗರಳಿ

 ಮುಂಜಾವಿನ ಮಂಜು ಹನಿಗೆ ಕಾತರಿಸುತ್ತಾ 

ತಲೆಬಾಗಿ ನರ್ತಿಸುತ್ತಾ 

ಘಮಘಮಿಸುವ ಪರಿಮಳಕ್ಕೆ 

ಆಶ್ಚರ್ಯವಾಗುತ್ತದೆ ........


ಬಿದ್ದ ನೀರೆಲ್ಲಾ ಮಡುವಾಗಿ , ಕೆರೆಯಾಗಿ 

ತುಂಬಿ ಹರಿವ ನದಿಯಾಗಿ 

ಸಾಗರ ಸೇರುವ , ಪುನಃ ಆವಿಯಾಗಿ 

ಮೇಲೇರಿ ಮೋಡವಾಗಿ , ತಂಪಾಗಿ 

ಸುರಿವ ಮಳೆ ಹನಿಗಾಗಿ 

ಆಶ್ಚರ್ಯವಾಗುತ್ತದೆ .......


ಹಗಲು ಕಳೆದು , ಇರುಳು ಮೂಡುತ್ತಿದ್ದಂತೆ 

ನಿನ್ನೆಗಳು ಮಾಯವಾಗಿ 

ಕಾಲ ಗರ್ಭದಲ್ಲಿ ಸೇರಿ 

ಮಾಯವಾಗುವ ಬಗೆಗೆ 

ಆಶ್ಚರ್ಯವಾಗುತ್ತದೆ .....


ಭೂತ ವರ್ತಮಾನದಲ್ಲಿ ಆದ 

ಸಂಭವನೀಯ ಅಸಂಭವಗಳು ಉದ್ಭವಿಸಿ 

ಸತ್ಯ - ಮಿಥ್ಯಗಳ ನಡುವೆ 

ಹೋರಾಡುವ ಮನುಜರು ಸೋತು 

ಶೂನ್ಯಗೊಳ್ಳುವ ಬಗೆಗೆ 

ಆಶ್ಚರ್ಯವಾಗುತ್ತದೆ ........


 


Rate this content
Log in

Similar kannada poem from Action