Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಚರಿತ್ರೆಯ ಕಲ್ಲು

ಚರಿತ್ರೆಯ ಕಲ್ಲು

1 min
336



ಇಳಿ ಸಂಜೆ ಹೊತ್ತು 

ಬಾನು ಕೆಂಪೇರಿ 

ಸೂರ್ಯನ ಎಳೆ ಕಿರಣ 

ಸುತ್ತೆಲ್ಲ ಪಸರಿಸಿ 

ಎಲ್ಲ ಕತ್ತಲಾಗುವ ಸಮಯ 

ರಸ್ತೆಯ ಮೇಲೆ 

ದಾರಿ ದೀಪ ಇಲ್ಲದ ಸಮಯ !


ಹಬ್ಬದ ದಿನ 

ಗಜಿಬಿಜಿ ಗದ್ದಲದ ನಡುವೆ 

ಸಾಕೆನಿಸುವಷ್ಟು ದೂರ ನಡೆದಿದ್ದೆ

ಪೇಟೆಯ ಮುಖ್ಯ ರಸ್ತೆ ಬಿಟ್ಟು 

ಪಕ್ಕದ ಬೇರೆ ಬೇರೆ 

ಓಣಿ , ಗಲ್ಲಿಗಳಲ್ಲಿ ......

ಎಲ್ಲಿಂದಲೋ ಬಂದುಬಿತ್ತು 

ನನ್ನ ಎದುರು ಒಂದು ಕಲ್ಲು 

ಸುತ್ತಮುತ್ತ ನೋಡಿದೆ 

ಬಾಗಿ ಎತ್ತಿಕೊಂಡೆ 

ಆ ಒಂದು ಕಲ್ಲು 


ಇಲ್ಲಿ ನುಣುಪು , ಅಲ್ಲಿ ಚೂಪು 

ತುಸು ಬೂದು , ತುಸು ಕಪ್ಪು 

ಮೈತುಂಬಾ ಶತಮಾನಗಳ ಧೂಳು 

ಇಲ್ಲಿ ತುಸು ತಣ್ಣಗಿತ್ತು 

ಅಲ್ಲಿ ತುಸು ಬೆಚ್ಚಗಿತ್ತು 

ಆ ಒಂದು ಕಲ್ಲು 

ಹಳೆಯ ಕಲ್ಲೇ ಹೌದು 

ಆದರೂ , ಅದಕ್ಕೊಂದು ಹೊಸ ಮುಖವಿತ್ತು


ಸಾಕಾಗುವಷ್ಟು ಇತ್ತು ಆ ಕಲ್ಲು 

ಒಂದು ದೇಶಕ್ಕೆ ,ಒಂದು ಪರಂಪರೆಗೆ 

ಒಂದು ಚರಿತ್ರೆಗೆ !

ಆದರೂ ಸುಮ್ಮನಿತ್ತು ಆ ಕಲ್ಲು 

ಮರುದಿನ ಪತ್ರಿಕೆಯ ಪುಟದಲ್ಲಿ 

ವರದಿ ಹೇಳಿತು 

ಊರಲ್ಲಿ ಕೋಮು ಗಲಭೆ 

ಘರ್ಷಣೆ , ಇರಿತ , ಲೂಟಿ 

ಗುಂಪು , ಹಿಂಸೆ , ಸಾವು 

ಇನ್ನೂ ಏನೇನೋ ......?!


Rate this content
Log in

Similar kannada poem from Classics