Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಪುಟ್ಟ ಹಕ್ಕಿ

ಪುಟ್ಟ ಹಕ್ಕಿ

1 min
343


...................


ಊರ ಮುಂದಿನ ಬಯಲಿನಲ್ಲಿ 

ಆಳೆತ್ತರಕ್ಕೆ ಬೆಳೆದ ಮರದ 

ತುತ್ತ ತುದಿಯಲ್ಲಿದ್ದ 

ಪುಟ್ಟ ಹಕ್ಕಿಯೊಂದು 

ನನ್ನ ಮನದೊಳಗಿನ ಬಿಂಬವಾಯ್ತು 

ಗೂಡು ಕಟ್ಟಿತು , ಸ್ವಚ್ಛ ಮಾಡಿತು 

ಆದರೆ ಅದು ಮಾತನಾಡದು 

ಹಾಡಲಾರದು , ಕೈಗೆಟುಕುವುದನ್ನು ಹೆಕ್ಕಲಾರದು 

ತನ್ನಷ್ಟಕ್ಕೆ ತಾನೇ ರೂಪ ತಾಳಿತು !


ಗಿಡದಲ್ಲಿ ಹೂವ ಅರಳಿಸುತ್ತದೆ 

ಕಣ್ಣಿನ ಕಾಡಿಗೆ ತೀಡಿ 

ರೆಪ್ಪೆ ನೆರಳಿನಲ್ಲಿ 

ನಗೆಯನ್ನು ತಿದ್ದಿಕೊಡುತ್ತದೆ 

ತುಟಿಗೊಪ್ಪುವ ಬಣ್ಣದ ತೋರಣ ಕಟ್ಟಿ 

ಒರಟಾದ ಕೈ 

ಬಲವಾಗಿ ಹಿಡಿದಾಗ 

ಕೆನ್ನೆ ತುಂಬಾ ಜೇನು ಹನಿಸಿ 

ಗಲ್ಲಕ್ಕೆ ಕೈಯಾನಿಸಿ

ಮೌನವಾಗಿ ಕಥೆಯೊಂದ ಹೇಳುತ್ತದೆ !


ಇಂಥದೊಂದು ಹಕ್ಕಿ 

ನಿಮ್ಮಲ್ಲಿಯೂ ಇದೆಯೇ ?

ಮಾತನಾಡಿಸಿ , ಹಾಡೊಂದ ಹಾಡಿಸಿ 

ಮುತ್ತ ನೀಡಿ , ಪ್ರೀತಿ ಮಾಡಿ 

ಕನಸುಗಳಿಗೆ ಹಚ್ಚಿಕೊಡಿ ಬಣ್ಣ 

ಅದು ಬಲಿತು ಹಾರಾಡಲಿ 

ಬಣ್ಣ ಬಣ್ಣದ ರಥವೇರಿ 

ಜಾತ್ರೆ ಕಲೆತು ನಲಿಯಲಿ ....



Rate this content
Log in

Similar kannada poem from Classics