STORYMIRROR

Prabhakar Tamragouri

Abstract Inspirational Others

4  

Prabhakar Tamragouri

Abstract Inspirational Others

ನಿಮಗೆ ಅರ್ಥವಾಗುತ್ತಿದೆಯೇ ...?

ನಿಮಗೆ ಅರ್ಥವಾಗುತ್ತಿದೆಯೇ ...?

1 min
390


ಕತ್ತಲೆಯ ಗರ್ಭದಲ್ಲಿ 

ಅವಿತಿಟ್ಟುಕೊಂಡ ಬೆಳಕು 

ಕನಸು ಹರಿದು 

ಬಿಗಿಯಾಗಿ ಮುಚ್ಚಿದ 

ಕಣ್ಣು ರೆಪ್ಪೆಯೊಳಗೇ ಬಿಕ್ಕಳಿಸಿ

ಮೈಮನ ಮುರುಟಿದೆ 

ಹೊರಗೆ , ಅಂಗಳದ ಮೆಟ್ಟಿಲುಗಳ ಮೇಲೆ 

ಸೊಂಟದ ಮೇಲೆ ಕೈಯಿಟ್ಟುಕೊಂಡು 

ಸಹನೆಯಿಂದಲೇ ಕಾಯುತ್ತಿದೆ ವಾಸ್ತವ !


ಗಾಢ ನಿದ್ರೆಯಲಿ 

ಬೆವರಲಿ ತೋಯ್ದು 

ಕನಸಿನ ಭದ್ರ ಬೆನ್ನು 

ಫಕ್ಕನೆ ಕಣ್ಣಿನಾಳದಲ್ಲಿ ತುಂಬಿಕೊಂಡ 

ಯಾವುದೋ ಮಾಂತ್ರಿಕ ನೋಟ 

ನಿರಭ್ರ ಆಕಾಶದಲ್ಲಿ 

ಫಕಫಕನೆ ಹೊಳೆವ ನಕ್ಷತ್ರದಂತೆ 

ಹೊಳೆವ ಅಪರಿಚಿತ ಕಣ್ಣುಗಳು 

ಮುಚ್ಚಿಟ್ಟ ಕನವರಿಕೆಯ 

ಮುದ್ದು ತುಟಿಗಳಂಥ 

ಹರೆಯದ ಕನಸುಗಳು 

ಬಿಗಿದ ನಿಷ್ಠೆಯ ಆಮೂರ್ತತೆಗೆ 

ಕಿಸಕ್ಕನೆ ನಕ್ಕ ಆಕಾರವೇ 

ಯಾಕೆ ಹೀಗೆ ಕರಡಿಸಿದೆ ?


ಬಾನಲ್ಲಿ ಮಿಂಚುತ್ತಿರುವ ನಕ್ಷತ್ರಗಳೆಲ್ಲ 

ಒಮ್ಮೆಲೇ ಆರಿಹೋಗಿ 

ಒಳ , ಹೊರಗೆ ತುಂಬಿಕೊಂಡ 

ಕಪ್ಪು ಕತ್ತಲಲ್ಲಿ ವಾಸ್ತವ ಜಗದ 

ವ್ಯವಹಾರ ಕಂಡು ಬೆಚ್ಚಿದ್ದೇನೆ 

ದಿಗ್ಭ್ರಮೆಯಲಿ ನನ್ನನ್ನು ನಾ ಕಳೆದುಕೊಳ್ಳುತ್ತಿದ್ದೇನೆ 

ಹೀಗೆ , ನನ್ನ ಕನಸಿನ ಲೋಕ 

ಅಳಿದಿದ್ದು ನಿಮಗೆ ಅರ್ಥವಾಗುತ್ತಿದೆಯೇ ....?






Rate this content
Log in

Similar kannada poem from Abstract