STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಮನವನನುಗೊಳಿಸು

ಮನವನನುಗೊಳಿಸು

1 min
286

ಲೋಕದ ಡೊಂಕುಗಳು ಕಾಣದಂತೆ 

ಕುರುಡನ ಮಾಡು ಹೇ ದೇವಾ


ಬೇಡದ ಮಾತುಗಳು ಕೇಳದಂತೆ

ಕಿವುಡನ ಮಾಡು ಹೇ ದೇವಾ


ಪರರ ತಪ್ಪುಗಳ ಟೀಕಿಸದಂತೆ

ಮೂಕನ ಮಾಡು ಹೇ ದೇವಾ 


ದೈವ ಧರ್ಮಗಳ ನಿಂದಿಸದಂತೆ 

ನಾಲಿಗೆಯ ಶುದ್ದಿ ಮಾಡು ಹೇ ದೇವಾ


ಕಣ್ಣೊಳಗಿರುವ ಕಣ್ಣುಗಳ ತೆರೆಯಿಸಿ

ಕಿವಿಯೊಳಗಿರುವ ಕಿವಿಯ ಅರಳಿಸಿ


ಜಿಹ್ವೆಯೊಳಗೆ ನಿನ್ನ ನಾಮವ ತುಂಬಿ

ನಾಸಿಕದೊಳಗೆ ಪ್ರಸಾದ ಪರಿಮಳ ತುಂಬಿ 


ಅಂತರಂಗದಲ್ಲಿ ನಿನ್ನ ನೆನಪುಗಳ ತುಂಬಿ

ಕರ್ಮ ಜ್ಞಾನೇಂದ್ರಿಯಗಳ ಶುದ್ದಿಗೊಳಿಸಿ


ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ 

ನನ್ನ ಮನವನನುಗೊಳಿಸು ಹೇ ದೇವಾ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract