ಅಗೋಚರ
ಅಗೋಚರ
ನಿನ್ನ ದೇಹ ಬಿಟ್ಟು
ಹೋಗುವಾಗ ಇಲ್ಲಿಂದ
ಕಾಣದು ಯಾರಿಗೂ ನಿನ್ನ
ಆತ್ಮದ ಮುಂದಿನ ಗತಿ
ಆ ಅಗೋಚರ ಜಗತ್ತಿನಲ್ಲಿ
ನೀ ಎಲ್ಲಿಹೆಯೋ? ಹೇಗಿಹೆಯೋ?
ಹುಡುಕಿದರೆ ಸಿಗಲಿಲ್ಲ ಇಲ್ಲಿ
ನೀ ನಡೆದು ಹೋದ ಹಾದಿ
ನನಗೆ ಕಾಡದಿಹದು ಇಲ್ಲಿ
ಹೇಗೆ ಹುಡುಕಲಿ ನಿನ್ನ ?
ದೇಹವಳಿದ ನಿನ್ನ
ವಿಜಯಭಾರತೀ.ಎ.ಎಸ್.
